alex Certify ಹವಾಮಾನ ವೈಪರೀತ್ಯದ ಎಫೆಕ್ಟ್:‌ ಬಿಸಿಗಾಳಿಗೆ ಬಿರುಕು ಬಿಟ್ಟ ಸೇತುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹವಾಮಾನ ವೈಪರೀತ್ಯದ ಎಫೆಕ್ಟ್:‌ ಬಿಸಿಗಾಳಿಗೆ ಬಿರುಕು ಬಿಟ್ಟ ಸೇತುವೆ

ಹವಾಮಾನ ವೈಪರೀತ್ಯ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಆಗಾಗ್ಗೆ ಹೊಸ ಹೊಸ ಉದಾಹರಣೆ ನಮಗೆ ಕಾಣಿಸುತ್ತಿದೆ. ಇದೀಗ ಚೈನಾ ತಾಪಮಾನದಲ್ಲಿ ಏರಿಕೆ ಕಾಣಿಸಿದ್ದರಿಂದ ಅಲ್ಲಿನ ಸೇತುವೆಯೊಂದು ಬಿರುಕು ಬಿಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜುಲೈ 23ರಂದು ಕಿಯಾನ್​ಝೌದಲ್ಲಿನ ಸೇತುವೆಯಲ್ಲಿ ತೀವ್ರವಾದ ಶಾಖದ ಕಾರಣಕ್ಕೆ ಬಿರುಕು ಕಾಣಿಸಿದೆ. ಆ ಸೇತುವೆಯು 20 ವರ್ಷಗಳಷ್ಟು ಹಳೆಯದಾಗಿದೆ. ಆ ದಿನ ತಾಪಮಾನವು 40 ಡಿಗ್ರಿ ಸೆಲ್ಸಿಯಸ್​ ಆಗಿತ್ತು.

ಸುಮಾರು ಹದಿನೈದು ದಿನಗಳ ಹಿಂದೆ ಚೀನಾದಲ್ಲಿ ದಾಖಲೆಯ ಹೆಚ್ಚಿನ ತಾಪಮಾನ ವರದಿಯಾಗಿದೆ. ಆ ದೇಶದ ಹಲವಾರು ಪ್ರಾಂತ್ಯಗಳಲ್ಲಿ ಹೀಟ್​ ಸ್ಟ್ರೋಕ್​ಗೆ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದರು.

ಹವಾಮಾನ ಬದಲಾವಣೆಯಿಂದಾಗಿ ಹವಾಮಾನ ವೈಪರೀತ್ಯದ ಸಾಧ್ಯತೆಯಿದ್ದು, ಬಿಸಿ ಗಾಳಿಯು ಹೆಚ್ಚಿನ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ, ಇದು ದೊಡ್ಡ ಮೇಘಸ್ಫೋಟಗಳು ಮತ್ತು ಪ್ರವಾಹಗಳಿಗೆ ಕಾರಣವಾಗುತ್ತದೆ.

ಸೇತುವೆ ಕುಸಿಯುವ ವಿಡಿಯೊಗಳು ಸಾಮಾನ್ಯವಾಗಿ ಜಾಲತಾಣದಲ್ಲಿ ಗಮನ ಸೆಳೆಯುತ್ತವೆ. ಈ ವರ್ಷದ ಫೆಬ್ರವರಿಯಲ್ಲಿ, ಯುಕೆಗೆ ಅಪ್ಪಳಿಸಿದ ಫ್ರಾಂಕ್ಲಿನ್​ -ಚಂಡಮಾರುತದ ನಂತರ ಸಣ್ಣ ಸೇತುವೆಯೊಂದು ಹರಿಯುವ ನೀರಿನಲ್ಲಿ ಮುಳುಗುತ್ತಿರುವುದನ್ನು ತೋರಿಸುವ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿದೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...