ಆಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉಂಗುರ ಬದಲಿಸಿಕೊಂಡು ವಿವಾಹವಾಗುವವಳಿದ್ದಳು. ಇದಕ್ಕಾಗಿ ಮದುವಣಗಿತ್ತಿಯಾಗಿ ಸಿಂಗರಿಸಿಕೊಂಡು ವಿವಾಹ ಸಮಾರಂಭದ ಸ್ಥಳಕ್ಕೆ ಹೋಗಲು ಹೆಜ್ಜೆ ಹಾಕಲು ಆರಂಭಿಸುತ್ತಿದ್ದಂತೆಯೇ ಎದುರಿನಿಂದ ಸೂಟು ಬೂಟು ಧರಿಸಿದ ಹಾಲುಗಲ್ಲದ ಮಗು “ಹೇ ಮಾಮ್(ಅಮ್ಮಾ)” ಎಂದು ಕೂಗುತ್ತಾ ಓಡೋಡಿ ಬಂದು ಆಕೆಯ ಮಡಿಲು ಸೇರುತ್ತದೆ.
ಅಂದ ಹಾಗೆ ಈ ಮಗು ಬೇರೆ ಯಾರೂ ಅಲ್ಲ. ಆ ಮದುವಣಗಿತ್ತಿಯ ಮಗು. ಆಕೆ ತನ್ನ ಮಗುವನ್ನು ಆಲಿಂಗನ ಮಾಡುವ ಆ ತಾಯಿ ಮಗುವಿನ ಪ್ರೀತಿಯ ಚಿಲುಮೆ ಉಕ್ಕುತ್ತದೆ. ಈ ಹೃದಯ ಕರಗುವ ದೃಶ್ಯಕ್ಕೆ ಅಲ್ಲಿ ನೆರೆದಿದ್ದವರು ಸಾಕ್ಷಿಯಾದರು.
ಯೋಗಿ ಆದಿತ್ಯನಾಥ್ ರನ್ನು ಕೊಂಡಾಡಿದ ಕಂಗನಾ ರಣಾವತ್
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, 30 ಸಾವಿರಕ್ಕೂ ಅಧಿಕ ವೀಕ್ಷಣೆಯಾಗಿದೆ ಮತ್ತು 2600 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇನ್ನೂ ಸಾವಿರಾರು ಮಂದಿ ನೆಟ್ಟಿಗರು ಈ ಅಂತಃಕರಣದ ವಿಡಿಯೋವನ್ನು ಹತ್ತಾರು ಬಾರಿ ವೀಕ್ಷಿಸಿದ್ದಿ, ತಾಯಿ-ಮಗುವಿನ ಪ್ರೀತಿಯನ್ನು ಕಂಡಾಗ ನೆಟ್ಟಿಗರಿಗೆ ಅರಿವಿಲ್ಲದೇ ಅವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದೆ.