ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಸಹೋದರಿ ಮತ್ತು ಸ್ನೇಹಿತರು ಸೇರಿಕೊಂಡು ಅತಿಥಿಗಳನ್ನು ಮನರಂಜಿಸಲು ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
2010ರ ಚಿತ್ರ ಬ್ಯಾಂಡ್ ಬಜಾ ಬಾರಾತ್ ಚಿತ್ರಕ್ಕೆ ಸುನಿಧಿ ಚೌಹಾಣ್ ಮತ್ತು ಮಾಸ್ಟರ್ ಸಲೀಂ ಕೆಲಸ ಮಾಡಿರುವ ಐನ್ವಾಯಿ ಐನ್ವಾಯಿ ಹಾಡಿಗೆ ಮದುಮಗಳ ಗ್ಯಾಂಗ್ ಭರ್ಜರಿಯಾಗಿ ಸ್ಟೆಪ್ ಹಾಕಿದೆ.
ತಪ್ಪಿಸಿಕೊಂಡ ಮಂಗಗಳನ್ನು ಹುಡುಕಲು ಹೆಲಿಕಾಪ್ಟರ್ ಬಳಸಿದ ಪೊಲೀಸ್
’ದಿ ವೆಡ್ಡಿಂಗ್ ಮಿನಿಸ್ಟ್ರಿ’ ಹೆಸರಿನ ಚಾನೆಲ್ ಒಂದು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, “ನಿಮ್ಮ ಸಹೋದರಿ ಮದುವೆಯಾಗುತ್ತಿದ್ದಾರೆ ಎಂದು ಅರಿತ ಬಳಿಕ ಆಗುವ ಸಂತಸದ ಪರಿ,” ಎಂದು ಕ್ಯಾಪ್ಷನ್ ಕೊಡಲಾಗಿದೆ.
ಮದುಮಗಳ ಮೆಹಂದಿ ಸಮಾರಂಭದ ವೇಳೆ ಈ ವಿಡಿಯೋ ಶೂಟಿಂಗ್ ಮಾಡಲಾಗಿದೆ. ಕುಣಿಯುತ್ತಿರುವ ಮಹಿಳೆಯರೆಲ್ಲಾ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದು, ಸಮಾರಂಭದ ಡೆಕೋರೇಷನ್ ಸಹ ಕಣ್ಮನ ಸೆಳೆಯುವಂತಿದೆ.
https://youtu.be/EC7CymfARTo