ಕೊರೊನಾ ಸೋಂಕಿನ ಭಯದ ನಡುವೆಯೂ ಮದುವೆ ಸಮಾರಂಭಗಳಿಗೆ ಕೊರತೆ ಇಲ್ಲ. ಕಡಿಮೆ ಜನರನ್ನು ಸೇರಿಸಿ, ಸಾಮಾಜಿಕ ಅಂತರದ ನೆಪದಲ್ಲಿ ರೆಸಾರ್ಟ್ ಗಳಲ್ಲಿ ದೂರದೂರದಲ್ಲಿ ಆಸನ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ವಿವಾಹಗಳು ನಡೆಯುತ್ತಲೇ ಇವೆ. ಗೃಹಪ್ರವೇಶ, ಹೋಮ ಹವನ, ಮಸೀದಿ, ಚರ್ಚ್‍ಗಳಲ್ಲಿ ಪ್ರಾರ್ಥನೆಗಳು ಕೂಡ ಸಾಗುತ್ತಲೇ ಇವೆ.
ಧಾರ್ಮಿಕ ಸಮಾರಂಭಗಳಲ್ಲಿ ಇಂತಿಷ್ಟೇ ಜನರು ಮಾತ್ರವೇ ಸೇರಬೇಕು ಎಂದು ಸರಕಾರ ಷರತ್ತು ವಿಧಿಸಿದ್ದರೂ ಬಹುತೇಕ ಸಲ ಅದು ಪಾಲನೆ ಆಗುತ್ತಿಲ್ಲ. ಬಳಿಕ ವಿವಾಹದಲ್ಲಿ ಭಾಗಿಯಾದವರು ಕೊರೊನಾ ಸೋಂಕಿನ ಲಕ್ಷಣಗಳಿಂದ ಬಳಲುವುದು ಕೂಡ ತಪ್ಪುತ್ತಿಲ್ಲ.
ಅದೇ ರೀತಿ ಈ ವಿವಾಹ ಋತುವಿನ ನಡುವೆ ಶಿವಾನಿ ಬಫ್ನಾ ಅವರ ಮದುವೆಯಲ್ಲಿನ ಡ್ಯಾನ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧುವು ಲೆಹಂಗಾ ಧರಿಸಿ, ಸುಂದರವಾಗಿ ಅಲಂಕಾರಗೊಂಡು ಬಾಲಿವುಡ್‍ನ ಜನಪ್ರಿಯ ಹಾಡು “ಮಾಹೀ ವೇ”ಗೆ ಸ್ಟೆಪ್ಸ್ ಹಾಕಿದ್ದಾಳೆ. ವಿಶೇಷವೆಂದರೆ ವಧು ಶಿವಾನಿಯ ತಾಯಿ ಮತ್ತು ಸೋದರಿಯರು ಕೂಡ ಅವಳೊಂದಿಗೆ ಹೆಜ್ಜೆ ಹಾಕುವ ಮೂಲಕ ವೇದಿಕೆ ವಿಶೇಷ ಕಳೆಕಟ್ಟಿದೆ.
ಅಂದಹಾಗೆ, ದಿ ವೆಡ್ಡಿಂಗ್ ಮಿನಿಸ್ಟ್ರಿ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿದ್ದು, ನಿತ್ಯ ನೂರಾರು ಜನರು ವೀಕ್ಷಿಸಿ ಮೆಚ್ಚುಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತೀಯ ವಿವಾಹದಲ್ಲಿ ಮುಖ್ಯವಾಗಿ ಸೋದರಿಯರು, ತಾಯಿಯು ವಧುವಿನ ಜೊತೆಗೆ ನರ್ತಿಸದಿದ್ದರೆ ಹೇಗೆ ಎಂದು ವಿಡಿಯೋಗೆ ಅಡಿಬರಹ ಕೂಡ ಕೊಡಲಾಗಿದೆ. ಇದು ನಿಜ ಕೂಡ ಅಲ್ಲವೇ…?
https://youtu.be/b9TqLkJFEdA