
ಫ್ರಿಡ್ಜ್ ನಿಂದ ಮಗುವನ್ನು ನಜ್ಜುಗುಜ್ಜಾಗದಂತೆ ತಡೆಯಲು ವೇಟರ್ ತನ್ನ ಸರ್ವಿಂಗ್ ಟ್ರೇ ಬಳಸಿದ್ದಾನೆ. ಈ ವಿಡಿಯೋವನ್ನು ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದ್ದು, 16,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಈತನ ಸಮಯೋಚಿತ ನಡೆಯಿಂದ ಮಗುವಿನ ಪ್ರಾಣ ಉಳಿದಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಪೋಷಕರೊಂದಿಗೆ ಹೊರಗಡೆ ತಿರುಗಾಡುವಾಗ ಮಕ್ಕಳು ಏನಾದರೊಂದು ಕಿತಾಪತಿ ಮಾಡುತ್ತಿರುತ್ತಾರೆ. ಹೀಗೆಯೇ ಬಾಲಕನೊಬ್ಬ ಪೋಷಕರ ಜೊತೆ ರೆಸ್ಟೋರೆಂಟ್ ಗೆ ತೆರಳಿದ್ದ. ಈ ವೇಳೆ ಓಡುತ್ತಾ ಫ್ರಿಡ್ಜ್ ಬಳಿ ಬಂದ ಆತ, ಒಮ್ಮೆಲೆ ಬಾಗಿಲು ಎಳೆದಿದ್ದಾನೆ. ಈ ವೇಳೆ ಫ್ರಿಡ್ಜ್ ಬಾಲಕನ ಮೇಲೆ ಬೀಳುತ್ತದೆ. ಕೂಡಲೇ ಅಲ್ಲಿದ್ದ ವೈಟರ್ ಓಡೋಡಿ ಬಂದು ತನ್ನ ಕೈಯಲ್ಲಿದ್ದ ಸರ್ವಿಂಗ್ ಟ್ರೇ ಮೂಲಕ ಫ್ರಿಡ್ಜ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ನಂತರ ಫ್ರಿಡ್ಜ್ ಅನ್ನು ಮೇಲಕ್ಕೆತ್ತಿ ಬಾಲಕನನ್ನು ರಕ್ಷಿಸಲಾಗಿದೆ.
ಹೋಟೆಲ್ ವೇಟರ್ ನ ಸಮಯೋಚಿತ ನಡೆಯಿಂದ ಮಗುವಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ. ಸಮಯೋಚಿತ ನಿರ್ಧಾರಕ್ಕಾಗಿ ವೇಟರ್ ನನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.