alex Certify ʼಡೇಟಿಂಗ್‌ʼ ಗೆ ಹೋದ ಪ್ರೇಮಿಗಳು ಮಾಡಿದ್ದೇನು ಗೊತ್ತಾ ? ವಿಡಿಯೋ ನೋಡಿದ್ರೆ ನಕ್ಕುಬಿಡ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡೇಟಿಂಗ್‌ʼ ಗೆ ಹೋದ ಪ್ರೇಮಿಗಳು ಮಾಡಿದ್ದೇನು ಗೊತ್ತಾ ? ವಿಡಿಯೋ ನೋಡಿದ್ರೆ ನಕ್ಕುಬಿಡ್ತೀರಾ..!

ಪ್ರೀತಿಸಿದ ಹುಡುಗ ಇಲ್ಲಾ ಹುಡುಗಿ ಜೊತೆ ಸಮಯ ಕಳೆಯೋದು ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಡೇಟಿಂಗ್ ಅಂತ ಹೇಳಿ ಪಾರ್ಕು, ಹೊಟೇಲ್, ಸಿನೆಮಾಗೆ ಹೋಗೋದು ಕಾಮನ್. ಅಲ್ಲಿ ಮಾತು, ಮುನಿಸು, ಸರಸ, ಸಲ್ಲಾಪ ಎಲ್ಲಾ ಇರುತ್ತೆ. ಆದರೆ ಇಲ್ಲೊಂದು ಜೋಡಿ ಇದೆ ನೋಡಿ. ಇವರು ಸಿಕ್ಕ ಸಮಯದಲ್ಲಿ ಏನು ಮಾಡಿದ್ರು ಅಂತ ಗೊತ್ತಾದ್ರೆ ಶಾಕ್ ಆಗ್ಬಿಡ್ತಿರಾ ? ಅದೇ ವಿಡಿಯೋ ಈಗ ಇಂಟರ್ ನೆಟ್‌ನಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಜೋಡಿಯೊಂದು ನದಿಯ ಬಳಿ ಕೂತಿರುವುದನ್ನ ನೋಡಬಹುದು. ಅಲ್ಲಿ ಅವರು ಮಾಡ್ತಿದ್ದಿದ್ದು ಏನು ಅಂತ ಗೊತ್ತಾದ್ರೆ ನಕ್ಕು ಬಿಡ್ತಿರಾ ! ಯಾಕಂದ್ರೆ ಅಲ್ಲಿ ಅವರ ಮಾತಾಗಲಿ, ನಗುವಾಗಲಿ ಇಲ್ಲ ಸರಸ ಸಲ್ಲಾಪ ಏನೂ ಇರಲಿಲ್ಲ. ಬದಲಿಗೆ ಹುಡುಗ ತನ್ನ ಹುಡುಗಿಯ ತಲೆಯಲ್ಲಿ ಇರುವ ಹೇನು ಹುಡುಕುತ್ತಿದ್ದನ್ನು ನೋಡಬಹುದು. ಅಲ್ಲೇ ಇದ್ದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ಇದನ್ನ ರೆಕಾರ್ಡ್ ಮಾಡಿಕೊಂಡಿದ್ದಾರೆ.

‘ಘಂಟಾ‘ ಅನ್ನೊ ಮೆಮೆ ಪೇಜ್ ಈ ವಿಡಿಯೋವನ್ನ ಶೇರ್ ಮಾಡಿಕೊಂಡಿದೆ. ಈ ವಿಡಿಯೋ ಈಗಾಗಲೇ 3.4 ಮಿಲಿಯನ್ ವೀಕ್ಷಣೆ ಪಡೆದಿದ್ದು, 169 k ಲೈಕ್ ಪಡೆದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಜೋಡಿ ಇದ್ದರೆ ಹೀಗಿರಬೇಕು ಅಂತ ಕಾಮೆಂಟ್ ಕೂಡಾ ಮಾಡುತ್ತಿದ್ಧಾರೆ. ಸಿಕ್ಕ ಕೊಂಚ ಸಮಯ ಪ್ರೀತಿಸುವುದು ಬಿಟ್ಟು ಇದೇನಿದು ಅಂತ ಒಬ್ಬರು ತಮಾಷೆ ಮಾಡಿದರೆ, ಇನ್ನೊಬ್ಬರು ನೀನು ಪ್ರೇಮಿನಾ ಕೋತಿನಾ ಅಂತ ಇನ್ನೊಬ್ಬರು ಹೇಳಿದ್ಧಾರೆ. ಒಟ್ಟಿನಲ್ಲಿ ಈ ವಿಡಿಯೋ ನೋಡಿ ಜನರು ಎಂಜಾಯ್‌ ಮಾಡ್ತಿರೋದಂತೂ ನಿಜ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...