ಪೋಪ್ ಫ್ರಾನ್ಸಿಸ್‌ರ ಬಿಳಿ ಬಣ್ಣದ ಟೋಪಿಯನ್ನೇ ಎಗರಿಸುವ ಯತ್ನ ಮಾಡಿದ ಹುಡುಗನೊಬ್ಬನ ವಿಡಿಯೋ ವೈರಲ್ ಆಗಿದೆ.
10 ವರ್ಷದವನಂತೆ ಕಾಣುವ ಈ ಬಾಲಕ ಮಾಸ್ಕ್ ಹಾಗೂ ಟ್ರಾಕ್ ಸೂಟ್ ಧರಿಸಿದ್ದ. ಪೌಲ್ 6 ಹಾಲ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಪೋಪ್‌ರತ್ತ ನಡೆದುಕೊಂಡು ಬಂದಾತ ಈತನನ್ನು ಭದ್ರತಾ ಅಧಿಕಾರಿಗಳು ನಿಲ್ಲಿಸಲು ಪ್ರಯತ್ನಿಸಿಲ್ಲ.
ಸ್ಕೇಟಿಂಗ್ ಧರಿಸಿ ಯುವತಿ ನೃತ್ಯ; ವಿಡಿಯೋ ನೋಡಿ ಫಿದಾ ಆದ ಜನ
ಪೋಪ್ ಜೊತೆಗೆ ಕೈ ಕುಲಾಯಿಸಿದ ಬಾಲಕ, ಅವರ ಮುಂದೆಯೇ ಕೆಳಗೆ ನೆಗೆದಿದ್ದಾನೆ. ಬಾಲಕನಿಗೆ ಅಲ್ಲಿಯೇ ಇರಬೇಕೆಂದು ಅನಿಸಿದ್ದು ಕಂಡು ಬಂದಾಗ ಪೋಪ್‌ರ ಭದ್ರತಾ ಸಿಬ್ಬಂದಿ ಆತನಿಗೆ ಕೂರಲು ಆಸನವೊಂದನ್ನು ಕೊಟ್ಟಿದ್ದಾರೆ. ಪೋಪ್ ಪಕ್ಕದಲ್ಲಿ ಕೂಡಲು ಕುರ್ಚಿ ಸಿಗುತ್ತಲೇ ಆತ ಕುಣಿದು ಕುಪ್ಪಳಿಸಿದ್ದಾನೆ. ವೇದಿಕೆಯ ಮೇಲೆ ತನ್ನಿಚ್ಛೆಯಂತೆ ಓಡಾಡಲು ಆರಂಭಿಸಿದ ಬಾಲಕ zucchetto ಎಂದು ಕರೆಯಲಾಗುವ ಪೋಪ್‌ರ ಟೋಪಿಯನ್ನು ಹಾಗೇ ಎತ್ತಿಕೊಳ್ಳುವ ಇಚ್ಛೆ ತೋರಿದ್ದಾನೆ. ಇದನ್ನು ಅರಿತ ಭದ್ರತಾ ಸಿಬ್ಬಂದಿ ಆತನಿಗೊಂದು ಅಂಥದ್ದೇ ಟೋಪಿ ನೀಡಿದ್ದಾರೆ.