ಸ್ನೇಹ…..ಪ್ರೀತಿ…….ಇವುಗಳಿಗೆ ಯಾವುದೇ ಭಾಷೆ, ಜಾತಿ, ಧರ್ಮ, ಗಡಿ, ಬಡತನ, ಶ್ರೀಮಂತಿಕೆ ಇದ್ಯಾವುದೂ ಅಡ್ಡಿ ಬರುವುದಿಲ್ಲ. ಹೃದಯದಿಂದ ಬರುವ ನಿಷ್ಕಲ್ಮಶ ಭಾವನೆ ಅದು. ಅಂತಹದ್ದೇ ಒಂದು ದೃಶ್ಯ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗಿದೆ.
ಟ್ರಾಫಿಕ್ ಜಾಮ್ ಆದ ಒಂದು ರಸ್ತೆಯಲ್ಲಿ ಕಂಡು ಬಂದ ದೃಶ್ಯ ಇದು. ಇಲ್ಲಿ ಕಾರೊಂದು ನಿಂತಿರುತ್ತೆ. ಆಗ ಸನಿಹದಲ್ಲಿದ್ದ ಬಾಲಕ ಕೈಯಲ್ಲಿರೋ ಬಟ್ಟೆ ತೆಗೆದುಕೊಂಡು ಒರೆಸಲು ಓಡಿ ಬರುತ್ತಾನೆ. ಅದೇ ಕಾರಿನ ಹಿಂದಿನ ಸೀಟಿನಲ್ಲಿ ಕೂತಿದ್ದ ಇನ್ನೊಬ್ಬ ಬಾಲಕ, ತನ್ನ ಕಾರಿನ ಗಾಜಿನ ಕಿಟಿಕಿಯನ್ನ ತೆರೆಯುತ್ತಾನೆ. ಮತ್ತು ಅಲ್ಲೇ ಶುರುವಾಗುತ್ತೆ ನೋಡಿ ಇವರಿಬ್ಬರ ಸ್ನೇಹದ ಒಡನಾಟ. ಕಾರಿನ ಒಳಗಿದ್ದ ಬಾಲಕ, ಆ ಬಡ ಬಾಲಕನ ಸ್ನೇಹ ಬೆಳೆಸಲು ಮುಂದಾಗುತ್ತಾನೆ. ಅಷ್ಟೆ ಅಲ್ಲ ತನ್ನ ಬಳಿ ಇರೋ ಆಟಿಕೆಯನ್ನ ಕೂಡಾ ಆತನಿಗೆ ಕೊಡುತ್ತಾನೆ.
ನೀರಿನಿಂದ ಹಾರಿ ಮೀನುಗಾರನ ಗಂಟಲಲ್ಲಿ ಸಿಲುಕಿಕೊಂಡ ಮೀನು; ಆಪರೇಶನ್ ಮಾಡಿ ಜೀವ ಉಳಿಸಿದ ವೈದ್ಯರು
ಆಟಿಕೆ ಸಿಕ್ಕ ಖುಷಿಯಲ್ಲಿ ಆತ ರಸ್ತೆಯಲ್ಲೇ ಕೂತು ಆಟ ಆಡೋದಕ್ಕೆ ಶುರು ಮಾಡುತ್ತಾನೆ. ಅಷ್ಟೇ ಅಲ್ಲ ಮತ್ತೆ ಕಾರಿನ ಬಳಿ ಹೋಗಿ ಆತನ ಜೊತೆ ಖುಷಿ-ಖುಷಿಯಾಗಿ ಮಾತನಾಡುತ್ತಾನೆ. ಆ ಪುಟ್ಟ ಬಾಲಕರ ಸ್ನೇಹದ ಸಂಭಾಷಣೆ ನೋಡೋದೆ ಚೆಂದವಾಗಿತ್ತು. ಅಲ್ಲೇ ಇದ್ದ ಇನ್ನೊಂದು ಕಾರಿನ ಚಾಲಕ ಇದನ್ನ ಮೊಬೈಲ್ನಲ್ಲಿ ರಿಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಲಕರ ಈ ಫ್ರೆಂಡ್ಶಿಪ್ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
https://twitter.com/TheFigen/status/1530951338649169920?ref_src=twsrc%5Etfw%7Ctwcamp%5Etweetembed%7Ctwterm%5E1530951338649169920%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fviral%2Fviral-video-boy-stuck-in-traffic-jam-makes-friends-with-poor-kid-offers-toys-heartwarming-clip-wins-hearts-article-91897040