
ಮಕ್ಕಳ ಮನಸ್ಸು ಎಷ್ಟು ಮುಗ್ಧವಾಗಿರುತ್ತೆ ಅಂದ್ರೆ, ಚಿಕ್ಕ ಚಿಕ್ಕ ಸಂಗತಿಗಳಲ್ಲೂ ಖುಷಿ ಪಡೋ ಮನಸ್ಸು ಅವರದ್ದು. ಅದಕ್ಕೆ ಎಷ್ಟೋ ಬಾರಿ, ನಾವು ಮಕ್ಕಳಾಗಿದ್ದರೆನೇ ಚೆನ್ನಾಗಿರೋದು ಅಂತ ಅನಿಸಿ ಬಿಡುತ್ತೆ. ಮಕ್ಕಳು ಆಟ ಆಡೋ ರೀತಿ, ಅವುಗಳ ತುಂಟಾಟ ಇವೆಲ್ಲ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೇ ಇರುತ್ತೆ.
ಅವೆಲ್ಲ ನೋಡ್ತಿದ್ರೆ ಎಂಥವರಿಗೂ ಖುಷಿ ಆಗೇ ಆಗುತ್ತೆ. ಅಂತಹದ್ದೇ ಮತ್ತೊಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೆ ವೈರಲ್ ಆಗಿದೆ.
BIG NEWS: ಪಿಯು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಕೈಬಿಟ್ಟ ಶಿಕ್ಷಣ ಇಲಾಖೆ
ಇಲ್ಲಿ ನೋಡಿ, ಬಾಲಕರಿಬ್ಬರು ತಮ್ಮ ಪಾಡಿಗೆ ತಾವು ರಸ್ತೆ ಪಕ್ಕದಲ್ಲಿ ಆಟ ಆಡ್ತಾ ಇರ್ತಾರೆ, ಅದೇ ರಸ್ತೆಯಲ್ಲಿ ಭಾರೀ ಗಾತ್ರದ ಲಾರಿಯೊಂದು ಹಾದು ಹೋಗುತ್ತಿರುತ್ತೆ. ಲಾರಿ ಬಂದ ಖುಷಿಗೆ ಆ ಪುಟ್ಟ ಪೋರರು, ಖುಷಿಯಿಂದ ಲಾರಿಯತ್ತ ಕೈಯಾಡಿಸುತ್ತಾರೆ. ಇದನ್ನ ಗಮನಿಸಿದ ಲಾರಿ ಡ್ರೈವರ್ ಅವರಿಗಂತಾನೇ ಹಾರ್ನ್ ಬಾರಿಸುತ್ತಾನೆ. ಆ ಹಾರ್ನ್ ಸೌಂಡ್ಗೆ ಬಾಲಕರು ಕುಣಿದು ಕುಪ್ಪಳಿಸಿ ಬಿಡ್ತಾರೆ.
ಅದೊಂದು ಅದ್ಭುತ ದೃಶ್ಯ, ಮಕ್ಕಳ ಮನಸ್ಸು ಮಾತ್ರ, ಇಂಥಾ ಖುಷಿಯನ್ನ ಅನುಭವಿಸೋ ಮನಸ್ಸು ಹೊಂದಿರುತ್ತೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಜನರು ಖುಷಿ ಪಡುತ್ತಿದ್ದಾರೆ.