ನಮ್ಮ ಹಿರಿಯರು ರಾತ್ರಿಯಲ್ಲಿ ವಾಹನಗಳಲ್ಲಿ ಪ್ರಯಾಣಿಸುವಾಗ ದಾರಿ ಮಧ್ಯೆ ಬಿಳಿ ಸೀರೆಯಲ್ಲಿ ಹೆಣ್ಣು ದೆವ್ವ ಎದುರಾದ ಅನೇಕ ಭಯಾನಕ ಕಥೆಗಳನ್ನು ಹೇಳಿರಬಹುದು, ಕೆಲವು ವರ್ಷಗಳ ಹಿಂದೆ ಇದೆಲ್ಲ ಹರಟೆಕಟ್ಟೆಯ ಚರ್ಚಾ ವಿಚಾರಗಳು, ಈ ಹೆಣ್ಣು ದೆವ್ವಗಳ ಕತೆ ಚಲನಚಿತ್ರಗಳಲ್ಲೂ ಬಂದು ಹೋಗಿವೆ.
ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದ ವೈರಲ್ ಆಗಿದ್ದು, ಕತ್ತಲೆ ರಾತ್ರಿಯಲ್ಲಿ ಸಾಗುವ ದ್ವಿಚಕ್ರ ಸವಾರರು ಬಿಳಿ ಸೀರೆಯಲ್ಲಿರುವ ಹೆಣ್ಣು ದೆವ್ವ ಕಂಡು ಬೇಸ್ತು ಬಿದ್ದ ಪ್ರಸಂಗದ್ದಾಗಿದೆ.
ಕತ್ತಲು ಮತ್ತು ನಿರ್ಜನ ರಸ್ತೆಯಲ್ಲಿ ಮೂವರು ಬೈಕ್ನಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರಸ್ತೆಯ ಬದಿಯಲ್ಲಿ ಬಿಳಿ ಬಟ್ಟೆಯಲ್ಲಿದ್ದ ವ್ಯಕ್ತಿ ಇರುವುದನ್ನು ಗಮನಿಸಿ ಚಿತ್ರೀಕರಣ ಮಾಡಲು ಪ್ರಾರಂಭಿಸುತ್ತಾರೆ. ಬೈಕ್ ಸವಾರ ನಿಧಾನವಾಗಿ ಮುಂದೆ ಸಾಗುತ್ತಿದ್ದಂತೆ ಅದು ದೆವ್ವವೆಂದು ಗಾಬರಿ ಬೀಳುತ್ತಾರೆ.
ನಂತರ ಆ ಮೂವರು ರಸ್ತೆಯ ಮಧ್ಯದಲ್ಲಿ ಶ್ವೇತ ವಸ್ತ್ರಧಾರಿ, ಕೂದಲು ಬಿಚ್ಚಿಕೊಂಡ ಆಕಾರ ಗಮನಿಸಿ ತಬ್ಬಿಬ್ಬಾಗುತ್ತಾರೆ. ಹಿಂದಿದ್ದ ಇಬ್ಬರು ಗೆಳೆಯರು ಬೈಕ್ನಿಂದ ಇಳಿದು ಗಾಬರಿ ಬೀಳಿಸಿದ್ದರಿಂದ ಚಾಲಕ ಮತ್ತಷ್ಟು ತಬ್ಬಿಬ್ಬಾಗುತ್ತಾನೆ.
ತಮಾಷೆಯಾಗಿ ಇದನ್ನು ಪ್ರಸ್ತುತಪಡಿಸಿದ್ದು, ವಿಡಿಯೋ ನೋಡಿದವರನ್ನು ಒಂದು ಕ್ಷಣ ಹೆದರಿಸುವಲ್ಲಿ ಯಶಸ್ವಿಯಾಯಿತು. ಕೊನೆಗೆ ಇದೊಂದು ಉದ್ದೇಶಪೂರ್ವಕ ಎಂಬುದು ಗೊತ್ತಾಗುತ್ತದೆ, ನೆಟ್ಟಿಗರು ಇದನ್ನು ಕಂಡು ನಕ್ಕು ಕಾಮೆಂಟ್ ಮಾಡಿದ್ದಾರೆ.