
ಬೈಕ್ನ ಹಿಂದೆ ಇದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ವ್ಯಕ್ತಿಯು ಬೈಕರ್ ಉಡುಪು ಹಾಗೂ ಹೆಲ್ಮೆಟ್ನಲ್ಲಿ ಗೊಪ್ರೊ ಕ್ಯಾಮರಾದೊಂದಿಗೆ ಮೋಟಾರ್ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದು ದ್ವಿಮುಖ ರಸ್ತೆಯಾಗಿದ್ದರೂ ಎರಡು ಬದಿಯ ನಡುವೆ ವಿಭಜಕ ಇರಲಿಲ್ಲ.
ಈ ವೇಳೆ ನಿಯಂತ್ರಣ ಕಳೆದುಕೊಂಡ ಮೋಟಾರ್ ಬೈಕ್ ರೈಡರ್, ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಟ್ಯಾಂಕರ್ನ ಟೈರ್ಗೆ ಡಿಕ್ಕಿ ಹೊಡೆದು, ದೂರಕ್ಕೆ ಬಿದ್ದಿದ್ದಾನೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.