ಮಹಿಳೆಯೊಬ್ಬಳು ತನ್ನ ಪತಿಯ ಸಹೋದರನ ಮದುವೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಬಿಳಿ ಮತ್ತು ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವರನ ಅತ್ತಿಗೆ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಇವರು, ವರ ಹಾಗೂ ವಧುವಿನ ಮುಂದೆ ನಿಂತು ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 1994 ರ ಹಮ್ ಆಪ್ಕೆ ಹೈ ಕೌನ್ ಸಿನಿಮಾದಲ್ಲಿ, ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ ‘ಲೋ ಚಾಲಿ ಮೈನ್’ಗೆ ವರನ ಅತ್ತಿಗೆ ಸೊಂಟ ಬಳುಕಿಸಿದ್ದಾರೆ.
ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರನ್ನು ಮದುವೆಯಾಗಲಿರುವ ತನ್ನ ತೆರೆಯ ಮೇಲಿನ ಸೋದರ ಮಾವ ಸಲ್ಮಾನ್ ಖಾನ್‌ಗಾಗಿ ಲೋ ಚಾಲಿ ಮೈನ್ ಅಪ್ನಿ ದೇವರ್ ಕಿ ಬಾರತ್ ಲೇಕೆ ಎಂಬ ಹಾಡಿಗೆ ನೃತ್ಯ ಮಾಡಿದ್ದರು.
ಶೆರ್ವಾನಿ ಧರಿಸಿರುವ ವರ ದೇವರ್ ಮತ್ತು ಸುಂದರವಾದ ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿರುವ ವಧುವು ಅತ್ತಿಗೆಯ ನೃತ್ಯವನ್ನು ವೀಕ್ಷಿಸುತ್ತಾ, ಖುಷಿಯಿಂದ ನಗುತ್ತಾ ನಿಂತಿದ್ದಾರೆ. ನೆರೆದಿದ್ದ ಅತಿಥಿಗಳು ಕೂಡ ಅವರ ನೃತ್ಯವನ್ನು ಇಷ್ಟಪಟ್ಟಿದ್ದು, ಹುರಿದುಂಬಿಸಿದ್ದಾರೆ. ಇನ್ನು ಈ ವಿಡಿಯೋವನ್ನು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮಹಿಳೆಯ ಆತ್ಮವಿಶ್ವಾಸದ ನೃತ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.