ಆಫೀಸ್ನಲ್ಲಿ ಎಷ್ಟೇ ಬ್ಯೂಸಿಯಾದ್ರೂ, ಪ್ರಕೃತಿ ಕರೆ ಬಂದರೆ ಸಾಕು ಎಲ್ಲ ಕೆಲಸವನ್ನ ಬದಿಗೊತ್ತಿ ಟಾಯ್ಲೆಟ್ಗೆ ಓಡಿ ಹೋಗಿ ಬಿಡ್ತೇವೆ. ಅದನ್ನ ತಡೆಹಿಡಿಯೋದು ಯಾರಿಂದಲೂ ಸಾಧ್ಯವಿಲ್ಲ. ಪಾಟ್ನಾದಲ್ಲಿಯೂ ರೈಲ್ವೇ ಟಿಕೆಟ್ ಬುಕ್ಕಿಂಗ್ ಮಾಡೋ ಕ್ಲರ್ಕ್ಗೂ ಕೆಲಸದ ನಡುವೆ ಪ್ರಕೃತಿ ಕರೆ ಬಂದಿದೆ. ಅದಕ್ಕೆ ಅವರು ಮಾಡಿದ್ದ ಐಡಿಯಾ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಟ್ನಾ ಜಂಕ್ಷನ್ ರೈಲ್ವೇ ಟಿಕೆಟ್ ಬುಕ್ಕಿಂಗ್ಗೆ ಹೋದವರಿಗೆ ಶಾಕ್ ಕಾದಿತ್ತು. ಯಾಕಂದ್ರೆ ಅಲ್ಲಿರುವ ಟಿಕೆಟ್ ಬುಕ್ಕಿಂಗ್ ಕೌಂಟರ್ನಲ್ಲಿ ಬೋರ್ಡ್ ಒಂದನ್ನ ಹಾಕಲಾಗಿತ್ತು. ಅದರಲ್ಲಿ ”ಬಾತ್ರೂಮ್ ಸೆ ಆರಹೇ ಹೈಂ” ಅಂತ ಬರೆದಿಡಲಾಗಿತ್ತು.
ಅಂದರೆ ಬಾತ್ರೂಮ್ಗೆ ಹೋಗಿದ್ದೇನೆ ಬರ್ತೇನೆ ಅನ್ನೊ ಅರ್ಥ ಅದು. ಟಿಕೆಟ್ ಬುಕ್ಕಿಂಗ್ ಮಾಡುವ ಕ್ಲರ್ಕ್ ಕೆಲಸದ ನಡುವೆಯೂ ಶೌಚಾಲಯಕ್ಕೆ ಹೋಗಿದ್ದಾನೆ. ಹಾಗೆ ಹೋಗುವ ಮುನ್ನ ಈ ಬೋರ್ಡ್ ಹಾಕಿ ಹೋಗಿದ್ದಾನೆ. ಅಂದ್ರೆ ಆತನಿಗೆ ಎಷ್ಟು ಅರ್ಜೆಂಟ್ ಇರಬೇಕು ಅಲ್ವಾ? ಆದರೂ ಟಿಕೆಟ್ ಬುಕ್ ಮಾಡೋಕೆ ಬರೋದು ಕನ್ಫ್ಯೂಸ್ ಆಗ್ಬಾರ್ದು ಅಂತ ಆತ ಹೀಗೆ ಬರೆದಿಟ್ಟು ಹೋಗಿದ್ದಾನೆ.
ಈ ಬೋರ್ಡ್ ವಿಡಿಯೋವನ್ನ Aye Himansu ಅನ್ನುವವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮತ್ತು ಎರಡು ನಗುವ ಎಮೋಜಿಗಳೊಂದಿಗೆ “ಪಾಟ್ನಾ ಜಂಕ್ಷನ್“ ಎಂದು ಬರೆದಿದ್ದಾರೆ. ಈ ವಿಡಿಯೋ ಈಗಾಗಲೇ 128 K ವೀಕ್ಷಣೆಗಳನ್ನ ಪಡೆದಿದೆ. 700ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ ನೋಡಿ ಕೆಲವರು ತಮಾಷೆ ಮಾಡಿದ್ರೆ ಇನ್ನು ಕೆಲವರು, ಕ್ಲರ್ಕ್ ಮಾಡಿರುವ ಈ ಐಡಿಯಾವನ್ನ ಹೊಗಳಿ ರೇಗಿಸಿದ್ದಾರೆ. ಒಬ್ಬರಂತೂ ಕೆಲಸದ ಪರಿ ಈ ಪ್ರಾಮಾಣಿಕತನವಾ ಅಂತ ಲೇವಡಿ ಮಾಡಿದ್ಧಾರೆ. ಮತ್ತೊಬ್ಬರು “ಬಿಹಾರಿ ರಾಕ್ಸ್” ಎಂದು ಕಾಮೆಂಟ್ ಹಾಕಿದ್ದಾರೆ.