ಸಣ್ಣ ಮಕ್ಕಳು ನಾವು ಯೋಚಿಸುವುದಕ್ಕಿಂತ ಬುದ್ಧಿವಂತರು ಎಂಬುವುದನ್ನು ಸಾಬೀತುಪಡಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಮಗುವಿನ ಕ್ಯೂಟ್, ಜೀನಿಯಸ್ ತಂತ್ರಕ್ಕೆ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
ಹೆಚ್ಚಿನ ಪೋಷಕರಿಗೆ ತನ್ನ ಮಗುವನ್ನು ಮಂಚದ ಮೇಲೆ ಮಲಗಿಸಿದ್ಮೇಲೆ ಭಯ ಇದ್ದೇ ಇರುತ್ತೆ. ಯಾಕೆಂದ್ರೆ ಮಗು ಎಚ್ಚರವಾಗಿ ಮಂಚದಿಂದ ಕೆಳಗೆ ಬಿದ್ದು ಬಿಟ್ರೆ ಅನ್ನೋ ಭಯ ಕಾಡುತ್ತಿರುತ್ತದೆ. ಆದರೆ, ಇಲ್ಲೊಂದೆಡೆ ಒಂದು ವರ್ಷದೊಳಗಿನ ಹೆಣ್ಣು ಮಗುವೊಂದು ತಾನೇ ಸ್ವತಃ ಹಾಸಿಗೆಯಿಂದ ಕೆಳಗಿಳಿಯಲು ಅದ್ಭುತ ತಂತ್ರವನ್ನು ಬಳಸಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ.
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಕೆಲವು ದಿನಗಳ ಹಿಂದೆ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಹಾಲುಗೆನ್ನೆಯ ಪುಟ್ಟ ಮಗುವಿನ ಐಡಿಯಾ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಮಗು ಹಾಸಿಗೆಯಿಂದ ಕೆಳಗಿಳಿಯಲು ಮೊದಲಿಗೆ ಹೊದಿಕೆಯನ್ನು ಕೆಳಗೆ ಹಾಕುತ್ತದೆ. ನಂತರ ಹಾಸಿಗೆಯಿಂದ ಇಳಿಯಲು ಪ್ರಯತ್ನಿಸುತ್ತದೆ. ಆದರೆ, ಯಾಕೋ ಇದು ಸರಿಯಿಲ್ಲ ಎಂದೆನಿಸಿ, ಮತ್ತೊಂದು ಹೊದಿಕೆಯನ್ನು ಕೆಳಗೆ ಹಾಕುತ್ತದೆ. ಮತ್ತೆ ಇಳಿಯಲು ಪ್ರಯತ್ನಿಸುತ್ತದೆ. ಈ ಬಾರಿ ಕೂಡ ಇಳಿದರೆ ಏಟು ಆಗಬಹುದು ಎಂದು ಯೋಚಿಸಿದ್ಯೋ ಏನೋ ಗೊತ್ತಿಲ್ಲ….. ಮತ್ತೆರಡು ದಿಂಬುಗಳನ್ನು ಕೆಳಗೆ ಹಾಕಿ ಸುರಕ್ಷಿತವಾಗಿ ಮಂಚದಿಂದ ಕೆಳಗಿಳಿದಿದೆ. ಮಗುವಿನ ಈ ತಂತ್ರ ನೆಟ್ಟಿಗರನ್ನು ಬೆರಗುಗೊಳಿಸಿದೆ.
https://twitter.com/rupin1992/status/1464231951200518147?ref_src=twsrc%5Etfw%7Ctwcamp%5Etweetembed%7Ctwterm%5E1464231951200518147%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-baby-genius-technique-get-down-from-bed-omg-video-watch-5115560%2F