ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹೀಗೆ ಪಿಜ್ಜಾ ವಿಶ್ವದಾದ್ಯಂತ ಬಹುತೇಕ ಎಲ್ಲರನ್ನೂ ಸಮ್ಮೋಹನಗೊಳಿಸಿದೆ.
ಇಲ್ಲೊಂದು ಹಾಲುಗಲ್ಲದ ಮಗು ಮೊದಲ ಬಾರಿಗೆ ಪಿಜ್ಜಾ ಟೇಸ್ಟ್ ಮಾಡಿ ಆಹ್ಲಾದಕರ ಅನುಭವವನ್ನು ತೋರಿಸುವ ಮೂಲಕ ಎಲ್ಲರ ಹಾಟ್ ಫೇವರಿಟ್ ಎನಿಸಿದೆ.
ತಾಯಿ ಆ ಪುಟಾಣಿ ಹೆಣ್ಣು ಮಗುವಿಗೆ ಮೊದಲ ಬಾರಿ ಪಿಜ್ಜಾದ ಒಂದು ತುತ್ತನ್ನು ನೀಡುತ್ತದೆ. ಅದನ್ನು ಕಚ್ಚುತ್ತಿದ್ದಂತೆಯೇ ಮಗುವಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕಣ್ಣುಗಳೆರಡನ್ನೂ ಮುಚ್ಚುತ್ತಾ ಅದರ ರುಚಿಯನ್ನು ಸವಿಯುತ್ತಾ ಆಹ್ಹಾ ಎಷ್ಟೊಂದು ಚೆನ್ನಾಗಿದೆ ಎಂಬಂತೆ ತನ್ನ ಭಾವನೆಯನ್ನು ಆಂಗಿಕವಾಗಿ ತೋರಿಸಿದೆ.
ಖಾತೆಗೆ 2 ಸಾವಿರ ರೂ. ಜಮಾ: ರೈತರಿಗೆ ಕೇಂದ್ರದಿಂದ ಮತ್ತೊಮ್ಮೆ ಗುಡ್ ನ್ಯೂಸ್
ಈ ಮೊದಲ ಅನುಭವದ ವಿಡಿಯೋವನ್ನು ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ‘oh_shoot_girl’ ಎಂದು ಉದ್ಘರಿಸಿದ್ದಾರೆ. ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ ಇದನ್ನು 11.9 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ, 1.1. ಮಿಲಿಯನ್ ಜನ ಲೈಕ್ ಮಾಡಿದ್ದಾರೆ.
ಮೊದಲ ಬಾರಿಗೆ ಪಿಜ್ಜಾ ತಿಂದ ಮಗುವಿನ ಕ್ಯೂಟ್ ಅಭಿವ್ಯಕ್ತಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಆ ಮಗುವಿನ ವಿಡಿಯೋ ನೋಡುತ್ತಿದ್ದಂತೆ ತಾವೂ ಸಹ ಬಿಸಿಬಿಸಿ ಪಿಜ್ಜಾ ತಿಂದ ಅನುಭವವಾಗುತ್ತಿದೆ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.