ಅನೇಕ ಮಕ್ಕಳು ಅಪರಿಚಿತರನ್ನು ಕಂಡರೆ ಸಾಕು ಹೆದರಿಕೊಂಡು ಅತ್ತುಬಿಡುತ್ತವೆ. ಮಗು ಅಪರಿಚಿತರೊಂದಿಗೆ ಬೆರೆಯಬೇಕೆಂದರೆ ಕನಿಷ್ಠ 2-3 ದಿನ ಆದ್ರೂ ಬೇಕಾಗುತ್ತದೆ. ಆದರೆ, ಇಲ್ಲೊಂದೆಡೆ ಅಪರಿಚಿತ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಓಡಿಹೋಗಿ, ಬಳಿಕ ಆತನಿಂದ ಬಿಟ್ಟು ಬರಲು ನಿರಾಕರಿಸಿದ ಮಗುವಿನ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಅಪರಿಚಿತ ವ್ಯಕ್ತಿಯ ಬಳಿಗೆ ಬಂದ ಮಗುವನ್ನು ಆತ ಅಪ್ಪಿಕೊಂಡು ತನ್ನ ತೋಳಿನಲ್ಲಿ ಹಿಡಿದುಕೊಂಡಿದ್ದಾರೆ. ಮಗು ಕೂಡ ಬೆಚ್ಚನೆ ಮಲಗಿದೆ. ಮಗುವನ್ನು ಅಪ್ಪಿ ಹಿಡಿದ ಜೋ ಕೆಫೆಯಲ್ಲಿ ಅತ್ತಿಂದಿತ್ತ ನಡೆಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ: ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು ವಿತರಣೆ
ಅಚ್ಚರಿ ಅಂದ್ರೆ, ಮಗು ವ್ಯಕ್ತಿಯನ್ನು ಈ ಮೊದಲು ಎಂದಿಗೂ ಭೇಟಿಯಾಗಿರಲಿಲ್ಲ. ಆದರೆ, ರೆಸ್ಟೋರೆಂಟ್ ಗೆ ಈತ ಎಂಟ್ರಿ ಕೊಟ್ಟ ಕೂಡಲೇ ಮಗು ಅವನ ಬಳಿ ಓಡಿ ಹೋಗಿದೆ. ಆತ ಎತ್ತಿಕೊಂಡ ಕೂಡಲೇ ಅವನೊಂದಿಗೆ ಮಗು ಬೆರೆತುಬಿಟ್ಟಿದೆ. ಅಷ್ಟೇ ಅಲ್ಲ ವ್ಯಕ್ತಿಯ ಜೊತೆಯಿದ್ದಾಗ ತನ್ನ ಅಮ್ಮ ಕರೆದ್ರೂ ಬರಲೊಲ್ಲೆ ಎಂದು ಜೋನನ್ನು ತಬ್ಬಿ ಮಗು ಕೋಲ್ಟರ್ ಹಿಡಿದುಕೊಂಡನಂತೆ.
ಇನ್ನು, ಕೆಲವು ದಿನಗಳ ನಂತರ ಮತ್ತೆ ಜೋ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದಾನೆ. ಆಗ ಕೂಡ ಕೋಲ್ಟರ್ ಆತನ ಬಳಿ ಓಡಿ ಹೋಗಿದ್ದಾನೆ. ಎರಡೂ ವಿಡಿಯೋಗಳನ್ನು ಮಗುವಿನ ತಾಯಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ. ಇದು 85,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
https://youtu.be/baEdQ83ruj8
https://youtu.be/RzYjDKR2v9E