ಪ್ರಾಣಿಗಳ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ ಈಗ ಹರಿದಾಡುತ್ತಿದ್ದು, ತಾಯಿ ಆನೆ ಸಮೀಪದಲ್ಲಿ ನಿಂತಿರುವ ಮರಿ ಆನೆ ತನ್ನ ಸೊಂಡಿಲಿನಿಂದ ನೀರು ಕುಡಿಯಲು ಕಲಿಯುತ್ತಿರುವುದು ಮುದ್ದುಮುದ್ದಾಗಿದೆ.
ಟ್ವಿಟರ್ನಲ್ಲಿ ರಾರ್ಬಟ್ ಇ ಫುಲ್ಲರ್ ಎಂಬ ಬಳಕೆದಾರರು ಈ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ, ಸೊಂಡಿಲನ್ನು ಹೇಗೆ ಬಳಸಬೇಕೆಂದು ಕಲಿಯಲು ಪ್ರಯತ್ನಿಸುತ್ತಿರುವಾಗ ಮರಿ ಆನೆ ತನ್ನ ಸೊಂಡಿಲಿನಿಂದ ನೀರನ್ನು ಚಿಮುಕಿಸುವುದನ್ನು ವಿಡಿಯೊ ತೋರಿಸುತ್ತದೆ. ನದಿಯಿಂದ ನೀರನ್ನು ಕುಡಿಯುವಾಗಲೆಲ್ಲಾ ನೀರನ್ನು ಚಿಮುಕಿಸುವುದನ್ನು ಮುಂದುವರೆಸುತ್ತದೆ.
ಇದು 7.4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, 1,400 ಕ್ಕೂ ಹೆಚ್ಚು ಲೈಕ್ ಸಂಗ್ರಹಿಸಿದೆ. ಇತ್ತೀಚೆಗಷ್ಟೇ ಸಿಂಹಗಳ ಗುಂಪಿನ ವಿಡಿಯೋ ವೈರಲ್ ಆಗಿತ್ತು. ಗಮನಾರ್ಹ ಸಂಖ್ಯೆಯ ಸಿಂಹಗಳಿಗೆ ನೆಲೆಯಾಗಿರುವ ಗುಜರಾತ್ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ವಿಡಿಯೊವನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ಹಲವಾರು ಮರಿಗಳಿದ್ದು, ಅವುಗಳು ಮೋಜು ಮಾಡುವುದು ಕಾಣಿಸುತ್ತದೆ.
ವಿಶ್ವ ಸಿಂಹ ದಿನದ ಸಂದರ್ಭದಲ್ಲಿ ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದರು. ವಿಡಿಯೊದ ಜೊತೆಗೆ “ಭಾರತದ ಗಿರ್ ಅರಣ್ಯದಿಂದ ರಾಜರು ಮತ್ತು ರಾಣಿಯರ ಸುಂದರ ಕುಟುಂಬ ಇಲ್ಲಿದೆ. ಇಂದು ವಿಶ್ವ ಸಿಂಹ ದಿನ” ಎಂದು ಬರೆದಿದ್ದರು.