
ಅನೇಕ ಇರುವೆಗಳು ಚಿನ್ನದ ಸರವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತಾ ನಂದಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಕಳ್ಳರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು..? ಎಂದು ಸುಶಾಂತಾ ನಂದಾ ಪ್ರಶ್ನೆ ಮಾಡಿದ್ದಾರೆ.
ಈ ವಿಡಿಯೋ ಈವರೆಗೆ 70 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. ಅನೇಕರು ಈ ವಿಡಿಯೋಗೆ ಫನ್ನಿ ಕಮೆಂಟ್ ಕೂಡ ಮಾಡಿದ್ದಾರೆ. ಇರುವೆಗಳು ಸಿಹಿಯನ್ನು ಇಷ್ಟ ಪಡುತ್ತವೆ. ಬಹುಶಃ ಈ ಚಿನ್ನದ ಸರ ಕೂಡ ಸಿಹಿ ಇರಬೇಕು ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ.