ಸೋಷಿಯಲ್ ಮೀಡಿಯಾದ ಈ ಯುಗದಲ್ಲಿ ವಿಚಿತ್ರ ಘಟನೆಗಳು ಬೇಗ ವೈರಲ್ ಆಗಿ ಬಿಡುತ್ತವೆ. ಅಂತಹದ್ದೇ ವಿಚಿತ್ರ ಮದುವೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಇತ್ತೀಚಿಗೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಜೋಡಿಯೊಂದರ ವಿಡಿಯೋ ಇದಾಗಿದ್ದು, ಘಂಟಾ ಎನ್ನುವ ಇನ್‌ಸ್ಟಾಗ್ರಾಮ್ ಪೇಜ್ ಈ ಫನ್ನಿ ವಿಡಿಯೋ ಹಂಚಿಕೊಂಡಿದೆ. ಉತ್ತರ ಭಾರತದ ಸಂಪ್ರದಾಯದಂತೆ ಹಾರ ಬದಲಾಯಿಸಿಮೊಳ್ಳುವ ಶಾಸ್ತ್ರ ಮುಗಿದಮೇಲೆ ಮುಂದಿನ ಶಾಸ್ತ್ರಗಳನ್ನ ನೆರವೇರಿಸಲು ತಯಾರಿ ನಡೆಸಿಕೊಳ್ಳಲಾಗಿತ್ತು. ಅದರಂತೆ ಮದುವೆ ನೆರವೇರಿಸಿ ಕೊಡಲು ಬಂದಿದ್ದ ಪಂಡಿತರು, ವಧುವಿಗೆ ನೀಡಲು ವರನಿಗೆ ಕೆಲವು ಸಿಹಿತಿಂಡಿಗಳನ್ನು ನೀಡುತ್ತಾರೆ. ವರನು ವಧುವಿಗೆ ಬರ್ಫಿಯ ತುಂಡನ್ನು ತಿನ್ನಿಸಲು ಮುಂದಾದಾಗ, ಕೋಪಗೊಂಡ ವಧು ಆತನ ಕೈಯಿಂದ ಸಿಹಿತಿಂಡಿ ತೆಗೆದುಕೊಂಡು ಎಸೆಯುತ್ತಾಳೆ.
BIG NEWS: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ದೇಶ ಭಕ್ತಿಯೇ….? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
ಇದಾದ ನಂತರವು ಶಾಸ್ತ್ರ ಮುಂದುವರೆಸಿದ ಪಂಡಿತರು, ವರನಿಗೆ ಕೊಡಲು ವಧುವಿಗೆ ಒಂದು ಲೋಟ ನೀರು ಕೊಡುತ್ತಾರೆ. ಆಕೆ ನೀರನ್ನು ವರನಿಗೆ ಕುಡಿಸಲು ಮುಂದಾದಾಗ, ವರನು ಅವಳಂತೆಯೇ ನಿರಾಕರಿಸಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ವಧು, ನೀರನ್ನು ಜನರಿದ್ದ ಕಡೆಗೆ ಎಸೆದಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಪ್ಲೋಡ್ ಮಾಡಿದ ಒಂದೇ ದಿನದಲ್ಲಿ 1.24 ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ.
ಈ ವಿಡಿಯೋ ನೋಡಿದ ಹಲವು ಇನ್‌ಸ್ಟಾಗ್ರಾಮ್ ಬಳಕೆದಾರರು, ಇಬ್ಬರೂ ವಿಶೇಷವಾಗಿ ವಧು ಬಲವಂತವಾಗಿ ಮದುವೆಯಾಗುತ್ತಿರಬಹುದು ಎಂದು ಊಹಿಸಿದ್ದಾರೆ. ಇವರಿಬ್ಬರು ಮದುವೆಯ ದಿನದಂದೇ ಈ ರೀತಿ ಜಗಳವಾಡುತ್ತಿದ್ದಾರೆ, ಮುಂದೆ ಏನು ಗತಿ. ಇವರ ಮದುವೆ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
https://youtu.be/fgQRxZhvk8Q