ಬ್ರೆಜಿಲ್: ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಅನ್ನು 2021 ರಲ್ಲಿ ಯೂಟ್ಯೂಬ್‌ನಲ್ಲಿ ದಿ ಸನ್ ಹಂಚಿಕೊಂಡಿತ್ತು. ಭಯಾನಕ ಎನಿಸುವ ಈ ವಿಡಿಯೋ ಇದೀಗ ಪುನಃ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಬ್ರೆಜಿಲ್‌ನ ಸರೋವರದಲ್ಲಿ ಈಜುತ್ತಿರುವ ವ್ಯಕ್ತಿಯನ್ನು ನೋಡಬಹುದು. ಏಕಾಏಕಿ ಮೊಸಳೆಯೊಂದು ಎಲ್ಲಿಂದಲೋ ಬಂದು ಆತನನ್ನು ಬೆನ್ನಟ್ಟಲು ಪ್ರಾರಂಭಿಸುತ್ತದೆ. ವ್ಯಕ್ತಿ ತನಗೆ ಸಾಧ್ಯವಾದಷ್ಟು ವೇಗವಾಗಿ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆಗ ಮೊಸಳೆ ಆತನ ತೋಳನ್ನು ಕಚ್ಚಿದೆ.
ಸ್ವಲ್ಪ ಸಮಯದ ಬಳಿಕ ವ್ಯಕ್ತಿ ಹಾಗೂ ಮೊಸಳೆ ನೀರಿನ ಆಳಕ್ಕೆ ಹೋಗುತ್ತಾರೆ. ಕೊನೆಗೆ ಅದರ ಕೈಯಿಂದ ವ್ಯಕ್ತಿ ತಪ್ಪಿಸಿಕೊಂಡು ಈಜಿಕೊಂಡು ಬರುತ್ತಾನೆ. ಅಂತೂ ಮೊಸಳೆಯಿಂದ ಆತ ತಪ್ಪಿಸಿಕೊಂಡು ಬಂದಿದ್ದರೂ ತೋಳುಗಳಲ್ಲಿ ರಕ್ತ ಸೋರುವುದನ್ನು ನೋಡಬಹುದು.