ವಿದ್ಯಾರ್ಥಿಗಳು ಇಲ್ಲದ ಸಮಯದಲ್ಲಿ ತರಗತಿಯಲ್ಲಿ ಸಿನಿಮಾ ಗೀತೆಯ ಹಾಡಿಗೆ ನೃತ್ಯ ಮಾಡಲು ಹೋದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯರು ಅಮಾನತು ಶಿಕ್ಷೆಗೆ ಒಳಗಾದ ಘಟನೆಯು ಆಗ್ರಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದೇ ಶಿಕ್ಷಕಿಯರ ಪಾಲಿಗೆ ಮುಳುವಾಗಿದೆ. ಅಸಭ್ಯ ವರ್ತನೆ ಆರೋಪದ ಅಡಿಯಲ್ಲಿ ರಶ್ಮಿ ಸಿಸೋಡಿಯಾ, ಜೀವಿಕಾ ಕುಮಾರಿ, ಅಂಜಲಿ ಯಾದವ್, ಸುಮನ್ ಕುಮಾರಿ ಹಾಗೂ ಸುಧಾರಾಣಿ ಎಂಬವರನ್ನು ಅಮಾನತು ಮಾಡಲಾಗಿದೆ. ಈ ಶಿಕ್ಷಕಿಯರು ಬಾಲಿವುಡ್ನ ಪ್ರಸಿದ್ಧ ‘ಮೈನು ಲೆಹೆಂಗಾ’ ಸೇರಿದಂತೆ ಸಾಕಷ್ಟು ಹಾಡಿಗೆ ನೃತ್ಯ ಮಾಡಿದ್ದರು.
ಈ ವಿಡಿಯೋವನ್ನು ಈ ವರ್ಷದ ಮಾರ್ಚ್ 21ರಂದು ಚಿತ್ರೀಕರಿಸಲಾಗಿತ್ತು. ಆದರೆ ಈ ವಿಡಿಯೋ ಗುರುವಾರದಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಶಿಕ್ಷಕಿಯರ ಮೇಲೆ ಕ್ರಮ ಕೈಗೊಂಡಿದೆ.
ಶಿಕ್ಷಕಿಯರು ನೃತ್ಯ ಮಾಡುತ್ತಿರುವ ಈ ಹಾಡು ಉತ್ತಮ ನೀತಿ ನೀಡುವಂತದ್ದಲ್ಲ. ತರಗತಿಯಲ್ಲಿ ಈ ಹಾಡಿಗೆ ನೃತ್ಯ ಮಾಡುವ ಮೂಲಕ ಇವರು ಶಿಕ್ಷಕರ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಅಧಿಕಾರಿ ಬ್ರಜ್ರಾಜ್ ಸಿಂಗ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಐವರು ಸಹಶಿಕ್ಷಕಿಯರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ಘಟನೆ ಸಂಬಂಧ ಸ್ಪಷ್ಟನೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ. ಇದರಲ್ಲಿ ನಾಲ್ವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಓರ್ವ ಶಿಕ್ಷಕಿಯ ಪ್ರತಿಕ್ರಿಯೆ ಬಾಕಿ ಇದೆ ಎಂದು ಬ್ರಜ್ರಾಜ್ ಹೇಳಿದ್ದಾರೆ. ‘
https://youtu.be/q4ZZh7DGgAI?t=5