
ಆಪ್ಘಾನಿಸ್ತಾನದ ಹಿಜಾಬ್ ಧರಿಸಿರುವ ಪುಟ್ಟ ಹುಡುಗಿ ತರಗತಿಯಲ್ಲಿ ನಿಂತು ಎ, ಬಿ, ಸಿ, ಡಿ ಹೇಳುವ ವಿಡಿಯೋ ವೈರಲ್ ಆಗಿದ್ದು, ಈ ಮುದ್ದು ಕಂದನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಶಿಕ್ಷಕರು ಇಂಗ್ಲಿಷ್ ವರ್ಣಮಾಲೆಯನ್ನು ಪಠಿಸಲು ಕೇಳಿದಾಗ ತನ್ನ ಮುದ್ದಾದ ಮುಖದ ಮೇಲೆ ನಗುವನ್ನು ಹೊಂದಿರುವ ಪುಟ್ಟ ಹುಡುಗಿ ಅಕ್ಷರಮಾಲೆಗಳನ್ನು ತನ್ನದೇ ಮುದ್ದು ಮಾತಿನಲ್ಲಿ ಹೇಳಿದ್ದಾಳೆ. ಮಧ್ಯದಲ್ಲಿ ಒಂದೆರಡು ವರ್ಣಮಾಲೆಯನ್ನು ಬಿಟ್ಟಿದ್ದಾಳೆ.
ಈ ವೀಡಿಯೊವನ್ನು ಮೂಲತಃ ಪತ್ರಕರ್ತ ನಾಸರ್ ಖಾನ್ ಅವರು ಹಂಚಿಕೊಂಡಿದ್ದಾರೆ. ಚಿಕ್ಕ ಮಕ್ಕಳ ಮೋಹಕತೆಯನ್ನು ಪಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಮುಸ್ಲಿಂ ಹೆಣ್ಣುಮಕ್ಕಳಿಗೂ ಸಮಾಜದಲ್ಲಿ ಸಮಾನವಾಗಿ ಪರಿಗಣಿಸಬೇಕೆಂದು ಮತ್ತು ಶಿಕ್ಷಣವೆಂಬ ಮೂಲಭೂತ ಹಕ್ಕನ್ನು ನೀಡಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಎಷ್ಟೊಂದು ಕ್ಯೂಟ್ ಎಂದಿದ್ದಾರೆ.