ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ನಾಯಿಯೊಂದು ಅಪ್ಪಿಕೊಂಡಿರುವ ವೀಡಿಯೊ ಅಂತರ್ಜಾಲದಲ್ಲಿ ಹಲವಾರು ಹೃದಯಗಳನ್ನು ಗೆದ್ದಿದೆ. ಬ್ರಿಯಾನ್ ಬೆನ್ಸನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಈ ಕಾರಣದಿಂದ ಅವರಿಗೆ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಹೆಚ್ಚು ಕಷ್ಟಕರವಾಗಿತ್ತು. ಚಿಕಿತ್ಸೆಯ ಅವಧಿಯಲ್ಲಿ ಅವರು ನಾಯಿಯನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದರು.
6 ವರ್ಷದ ಲ್ಯಾಬ್ರಡಾರ್ ರಿಟ್ರೈವರ್ ಆಸ್ಪತ್ರೆಯ ಬೆಡ್ ಹತ್ತಿರ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯು ತನ್ನ ಮಾಲೀಕರನ್ನು ಶಾಂತಗೊಳಿಸಲು ಮತ್ತು ಸಾಂತ್ವನ ಮಾಡಲು ಅವನ ಪಕ್ಕದಲ್ಲಿ ಮಲಗಿತ್ತು.
ಇದು ನನ್ನನ್ನು ನಿರಾಳವಾಗಿಸಿದೆ ಮತ್ತು ಪ್ರಸ್ತುತ ಪರಿಸ್ಥಿತಿಯಿಂದ ನನ್ನ ಮನಸ್ಸು ಹಗುರವಾಗಿದೆ. ವೈದ್ಯಕೀಯ ಸಿಬ್ಬಂದಿಯನ್ನು ನನ್ನ ನಾಯಿ ನಗುವಂತೆ ಮಾಡಿದೆ. ಕಳೆದ ವಾರಾಂತ್ಯದಲ್ಲಿ ನನಗೆ ಎದೆನೋವು ಮತ್ತು ಉಸಿರಾಡಲು ಕಷ್ಟವಾಗುತ್ತಿದೆ. ಲೆಕ್ಕವಿಲ್ಲದಷ್ಟು ಪರೀಕ್ಷೆಗಳನ್ನು ನಡೆಸಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಇದೀಗ ನಾಯಿಯೇ ನನ್ನ ಸಂಗಾತಿಯಾಗಿದೆ ಎಂದು ಬ್ರಿಯಾನ್ ಬರೆದುಕೊಂಡಿದ್ದಾರೆ. ನಾಯಿ ಮತ್ತು ಮನುಷ್ಯನ ಸಂಬಂಧಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
https://www.youtube.com/watch?v=2TDlnWJ9dw4&feature=youtu.be