84 ವರ್ಷದ ಮಾಜಿ ಪೈಲಟ್ ಮೈರ್ತಾ ಗೇಜ್ ಎಂಬುವವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಆಕೆ ಕೊನೆಯುಸಿರೆಳೆಯುವ ಮೊದಲು ತಾನು ಮಾಡಬಯಸಿದ ಕೆಲಸಗಳ ಪಟ್ಟಿಯನ್ನು ಮಾಡಿದ್ದರು. ಅವುಗಳಲ್ಲಿ ಒಂದು ಪೈಲಟ್ ಆಗಿ ತನ್ನ ದಿನಗಳನ್ನು ಮೆಲುಕು ಹಾಕುವುದು ಕೂಡ ಆಗಿತ್ತು.
ತನ್ನ ಯೌವನದಲ್ಲಿ ಪೈಲಟ್ ಆಗಿದ್ದ ಮೈರ್ತಾ, ಇಳಿವಯಸ್ಸಿನಲ್ಲಿ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳುವುದನ್ನು ಆಸೆಪಟ್ಟಿದ್ದಾರೆ. ಕುಟುಂಬವು ಆಕೆಯ ಆಸೆಗೆ ಸಹಾಯ ಮಾಡಲು ನಿರ್ಧರಿಸಿದೆ.
ಕೊನೆಯ ಬಾರಿಗೆ ವಿಮಾನವನ್ನು ಹಾರಿಸಬೇಕೆಂಬ ತನ್ನ ತಾಯಿಯ ಆಸೆಯನ್ನು ಪೂರೈಸಲು ಅರ್ಲ್, ಸಹ ಪೈಲಟ್ ಕೋಡಿ ಮ್ಯಾಟಿಯೆಲ್ಲೊ ಅವರನ್ನು ಸಂಪರ್ಕಿಸಿದ್ದಾರೆ. ವಿಮಾನದ ನಿಯಂತ್ರಣವನ್ನು ನೀಡುವ ಮೂಲಕ ಮಿರ್ತಾಳ ಆಸೆಯನ್ನು ಪೂರೈಸಲು ಮ್ಯಾಟಿಯೆಲ್ಲೊ ಒಪ್ಪಿಕೊಂಡಿದ್ದಾರೆ.
ಮೈರ್ತಾ ವಿಮಾನ ಹಾರಿಸುವ ವಿಡಿಯೋ ಹಾಗೂ ಫೋಟೋಗಳನ್ನು ಮ್ಯಾಟಿಯೆಲ್ಲೋ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. “ಕೆಲವು ದಿನಗಳ ಹಿಂದೆ ಈ ಅದ್ಭುತ ಮಹಿಳೆಯ ಅಂತಿಮ ಹಾರೈಕೆಯನ್ನು ಮತ್ತೆ ವಿಮಾನದಲ್ಲಿ ಹಾರಲು ಸಹಾಯ ಮಾಡಲು ನನ್ನನ್ನು ಕೇಳಲಾಯಿತು. ಅವಳು ತನ್ನ ಯೌವನದಲ್ಲಿ ಪೈಲಟ್ ಆಗಿದ್ದಳು. ಅವಳ ಮಗ ಸಹಾಯ ಮಾಡಲು ನನ್ನನ್ನು ಸಂಪರ್ಕಿಸಿದ್ದರು. ಆಕೆಗೆ ಸಹಾಯ ಮಾಡಲು ನನಗೆ ಸಂತೋಷವಾಯಿತು” ಎಂದು ಅವರು ಬರೆದಿದ್ದಾರೆ.
“ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಜನಿಸಿದ ನಾನು ಪೈಲಟ್ ಆಗಿ ನನ್ನ ವಾಯುಯಾನ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತು ಇತರರಿಗೆ ಈ ರೀತಿಯ ನೆನಪುಗಳನ್ನು ಮಾಡುವ ಭಾಗವಾಗಲು ಅದೃಷ್ಟಶಾಲಿಯಾಗಿದ್ದೇನೆ” ಎಂದು ಕೂಡ ತನ್ನ ಪೋಸ್ಟ್ ನಲ್ಲಿ ಅವರು ಬರೆದಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಹೃದಯ ಗೆದ್ದಿದೆ.