ಎಂಟು ವರ್ಷದ ಮಕ್ಕಳು ಸೈಕಲ್ ಬಿಟ್ಟು ದ್ವಿಚಕ್ರ ವಾಹನ ಚಲಾಯಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ವಾಹನ ಚಲಾಯಿಸಲು ಕನಿಷ್ಠ 18 ವರ್ಷಗಳಾಗಿರಬೇಕು. ಆದರೆ, ಪಾಕಿಸ್ತಾನದಲ್ಲಿ ಕೇವಲ 8 ವರ್ಷದ ಬಾಲಕನೊಬ್ಬ ಟಯೋಟಾ ಫಾರ್ಚೂನರ್ ಕಾರನ್ನು ಚಲಾಯಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದಾನೆ.
ಅವನು ಕಾರು ಚಲಾಯಿಸುವ ವಿಡಿಯೋ ವೈರಲ್ ಆಗಿದ್ದು, ಈ ಬಾಲಕನನ್ನು ಸಿಯಾಲ್ಕೋಟ್ ನ ಅಯಾನ್ ಎಂದು ಗುರುತಿಸಲಾಗಿದೆ. ಸಿಯಾಲ್ಕೋಟ್ ನ ರಸ್ತೆಯಲ್ಲಿ ನಿಂತಿದ್ದ ಟಯೋಟಾ ಫಾರ್ಚೂನರ್ ಕಾರಿನ ಡೋರ್ ತೆಗೆದವನೇ ಚಾಲಕನ ಸೀಟಿನಲ್ಲಿ ಕುಳಿತು, ವಾಹನವನ್ನು ಚಲಾಯಿಸಲಾರಂಭಿಸಿದ.
ಜೋ ಬೈಡೆನ್ ರನ್ನೂ ಹೊಗಳಿದ್ದೆ ಹಾಗಂತ ಅವರ ಪಾರ್ಟಿ ಸೇರಲು ಸಾಧ್ಯವೇ…? ಹಾರ್ದಿಕ್ ಪಟೇಲ್ ಪ್ರಶ್ನೆ
ಕುಳ್ಳಗಿದ್ದುದರಿಂದ ಮುಂದಿನ ರಸ್ತೆ ಕಾಣುವುದಿಲ್ಲ ಎಂಬ ಕಾರಣಕ್ಕೆ ಈ ಬಾಲಕ ಸೀಟಿನ ತುದಿಯಲ್ಲಿ ಕುಳಿತು, ಕತ್ತನ್ನು ಮೇಲಕ್ಕೆತ್ತಿ ರಸ್ತೆಯನ್ನು ಇಣುಕಿ ನೋಡುತ್ತಾ ಕಾರನ್ನು ಚಲಾಯಿಸುತ್ತಿದ್ದುದನ್ನು ಜನರು ಕಣ್ಣು ಮಿಟುಕಿಸದೇ ನೋಡುವ ಮೂಲಕ ತಮ್ಮ ಆಶ್ಚರ್ಯವನ್ನು ಹೊರ ಹಾಕಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಆದರೆ, ಆತ ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಆದಾಗ್ಯೂ ವಾಹನ ಚಲಾಯಿಸುವ ತನ್ನ ಚಾಣಾಕ್ಷ್ಯತನವನ್ನು ವಿಶ್ವಾಸದಿಂದಲೇ ಪ್ರದರ್ಶಿಸಿದ್ದಾನೆ.