alex Certify ಅಕ್ಕ-ತಮ್ಮನ ಈ ಅನುಬಂಧ: ಸಹೋದರಿ ಸಂತೈಸುವ ಪುಟಾಣಿಯ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕ-ತಮ್ಮನ ಈ ಅನುಬಂಧ: ಸಹೋದರಿ ಸಂತೈಸುವ ಪುಟಾಣಿಯ ವಿಡಿಯೋ ವೈರಲ್​

ಸಹೋದರ-ಸಹೋದರಿಯರ ಸಂಬಂಧವು ಇತರರಿಗಿಂತ ಭಿನ್ನವಾಗಿದೆ. ಇದು ಅನನ್ಯವಾಗಿದೆ. ಇದನ್ನು ವಿವರಿಸುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರು ಭಾವುಕರಾಗಿದ್ದಾರೆ.

ಈ ವಿಡಿಯೋದಲ್ಲಿ, ಏಳು ವರ್ಷದ ಹುಡುಗ ತನ್ನ ಅಳುತ್ತಿರುವ ಅಕ್ಕನನ್ನು ಸಮಾಧಾನಪಡಿಸುತ್ತಿರುವುದನ್ನು ಕಾಣಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ PAPz ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ. ಕುರ್ಚಿಯ ಮೇಲೆ ಕುಳಿತಿರುವ ತನ್ನ ಸಹೋದರಿಯ ಪಕ್ಕದಲ್ಲಿ ನಿಂತಿರುವ ಚಿಕ್ಕ ಹುಡುಗನನ್ನು ವಿಡಿಯೋದಲ್ಲಿ ನೋಡಬಹುದು.

ಅಕ್ಕ ದುಃಖಿತಳಾಗಿ ಕಾಣುತ್ತಾಳೆ ಮತ್ತು ಅವಳ ಕಣ್ಣುಗಳಲ್ಲಿ ನೀರು ತುಂಬಿದೆ. ಈ ಸಂದರ್ಭದಲ್ಲಿ ಹುಡುಗ ಅವಳ ಮುಖವನ್ನು ಹಿಡಿದುಕೊಂಡು, ಅವಳ ಕಣ್ಣೀರನ್ನು ಒರೆಸುತ್ತಾನೆ ಮತ್ತು ಚೆನ್ನಾಗಿದ್ದೀಯಾ ಎಂದು ತನ್ನ ಸಹೋದರಿಯನ್ನು ಕೇಳುತ್ತಾನೆ.

ನನ್ನ ಸಹೋದರ ಆಡುತ್ತಿದ್ದನು ಮತ್ತು ಇದ್ದಕ್ಕಿದ್ದಂತೆ ಅವನು ನನ್ನ ಸಹೋದರಿ ಅಳುತ್ತಿರುವುದನ್ನು ನೋಡಿದ ಅವನು ಎಲ್ಲವನ್ನೂ ಬಿಟ್ಟು ಅವಳ ಬಳಿಗೆ ಓಡಿ ಬಂದು ಸಾಂತ್ವನ ಹೇಳಿದನು ಎಂದು ಬಳಕೆದಾರ ಬರೆದುಕೊಂಡಿದ್ದಾರೆ. ಇದು ವೈರಲ್​ ಆಗಿದ್ದು, ಈ ಸಂಬಂಧಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ ಎನ್ನುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...