
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ಆಟಿಕೆಗಳೊಂದಿಗೆ ಆಟವಾಡುತ್ತಿರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಬಾಲೆಯ ಕಣ್ಣುಗಳಿಗೆ ಕನ್ನಡಕ ಹಾಕಿ, ಹಾಯ್ ಎಂದು ಹೇಳುತ್ತಾನೆ.
ಕನ್ನಡಕವನ್ನು ಮುಟ್ಟುತ್ತಾ ಅವಳಿಗೆ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತದೆ. ಸ್ವತಃ ಅವಳಿಗೆ ತಾನು ಅಷ್ಟು ಸ್ಪಷ್ಟವಾಗಿ ವಸ್ತುಗಳನ್ನು ನೋಡುತ್ತಿದ್ದೇನೆ ಎಂಬ ಬಗ್ಗೆ ನಂಬಲು ಸಾಧ್ಯವಾಗುತ್ತಿಲ್ಲ. ಕೆಲವು ಕ್ಷಣಗಳ ನಂತರ, ತನ್ನ ಕಣ್ಣುಗಳಿಂದ ಕನ್ನಡಕವನ್ನು ತೆಗೆದು ನಂತರ ಮತ್ತೆ ಹಾಕಿ ನಗುತ್ತಾ ಸುತ್ತಲೂ ನೋಡುತ್ತಾಳೆ.
ಈ ಹೃದಯಸ್ಪರ್ಶಿ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬಾಲಕಿಯ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅನೇಕರು ಇದೇ ರೀತಿಯ ಹಲವು ಹೃದಯಸ್ಪರ್ಷಿ ಕಥೆಗಳನ್ನು ಹಂಚಿಕೊಂಡಿದ್ದಾರೆ.