alex Certify Viral Video | ಹಿಟ್ಟಿನ ಚೀಲಕ್ಕಾಗಿ ಬೈಕ್‌ನಲ್ಲಿ ಲಾರಿ ಬೆನ್ನತ್ತಿದ ಜನ: ಇದು ಪಾಕಿಸ್ತಾನದ ಪ್ರಸ್ತುತ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಹಿಟ್ಟಿನ ಚೀಲಕ್ಕಾಗಿ ಬೈಕ್‌ನಲ್ಲಿ ಲಾರಿ ಬೆನ್ನತ್ತಿದ ಜನ: ಇದು ಪಾಕಿಸ್ತಾನದ ಪ್ರಸ್ತುತ ಸ್ಥಿತಿ

ಹೊಟ್ಟೆ ತುಂಬಾ ಊಟ ಇಲ್ಲ, ಕಣ್ತುಂಬ ನೆಮ್ಮದಿಯ ನಿದ್ದೆ ಇಲ್ಲ. ಪಾಕ್ ಜನ ಕಂಗೆಟ್ಟು ಹೋಗಿದ್ದಾರೆ. ಹಸಿವೆ ತಡೆದುಕೊಳ್ಳೊದಕ್ಕಾಗದೇ ಜನ ಕಣ್ಣೀರು ಹಾಕ್ತಿದ್ದಾರೆ. ಇದೆಲ್ಲ ಪಾಕ್‌ನಲ್ಲಿ ಸೃಷ್ಟಿಯಾಗಿರುವ ಆಹಾರ ಬಿಕ್ಕಟ್ಟಿನ ಎಫೆಕ್ಟ್.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪಾಕ್ನಲ್ಲಿ ಜನ ಊಟಕ್ಕಾಗಿ ಹೇಗ್ಹೇಗೆ ಒದ್ದಾಡ್ತಿದ್ದಾರೆ. ಹಿಟ್ಟಿನ ಚೀಲಕ್ಕಾಗಿ ಹೇಗ್ಹೇಗೆ ಕಿತ್ತಾಡ್ಕೊಳ್ತಿದ್ದಾರೆ ಅನ್ನೊ ವಿಡಿಯೋಗಳು ಪದೇ ಪದೇ ವೈರಲ್ ಆಗ್ತಾ ಇದೆ.

ಈಗ ಮತ್ತೆ ಪಾಕ್‌ನ ಭೀಕರತೆ ತೋರಿಸುವಂತ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಈ ದೃಶ್ಯ ನೋಡಿದಾಕ್ಷಣ ಇದೇನೋ ಬೈಕ್ ರೇಸ್ ಅಂತ ಅಂದ್ಕೊಳ್ಳೊದಕ್ಕೆ ಹೋಗ್ಬೇಡಿ. ಇದು ಯಾವುದೇ ರೇಸ್ ದೃಶ್ಯ ಅಲ್ಲ. ಗೋಧಿ ಚೀಲ ಪಡೆದುಕೊಳ್ಳೊದಕ್ಕೆ ಪಾಕ್ ಜನ ಲಾರಿಯೊಂದರ ಹಿಂದೆ ಹೋಗ್ತಿರೋ ವಿಡಿಯೋ ಇದು.

ಈ ವೀಡಿಯೊವನ್ನ ನ್ಯಾಷನಲ್ ಇಕ್ವಾಲಿಟಿ ಪಾರ್ಟಿ ಜೆಕೆಜಿಬಿಎಲ್ ಅಧ್ಯಕ್ಷ ಪ್ರೊಫೆಸರ್ ಸಜ್ಜದ್ ರಾಜಾ, ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್‌ನಲ್ಲಿ “ಇದು ಮೋಟಾರ್ ಸೈಕಲ್ ರ್ಯಾಲಿ ಅಲ್ಲ, ಒಂದು ಚೀಲ ಗೋಧಿ ಹಿಟ್ಟಿಗಾಗಿ ಅಸಹಾಯಕರ ಓಟ ಇದು“ ಎಂದು ಬರೆದಿದ್ದಾರೆ.

ಹಸಿವಿನಿಂದ ಪಾಕ್‌ ಜನ ಹೈರಾಣಾಗಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಸ್ತುಗಳ ಬೆಲೆ ಇವುಗಳಿಂದ ಕಂಗಾಲಾಗಿದ್ದಾರೆ. ಅದರಲ್ಲೂ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಒಂದೇ ಒಂದು ಚೀಲ ಹಿಟ್ಟಿಗಾಗಿ ಭಿಕ್ಷೆ ಬೇಡುತ್ತಿದ್ದಾನೆ. ದುಡ್ಡು ಕೊಟ್ಟಾದರೂ ಒಂದು ಚೀಲ ಪಡೆದುಕೊಳ್ಳೊ ಆಸೆ ಆತನದ್ದು. ನಿಜಕ್ಕೂ ಪಾಕ್‌ ಈಗ ನರಕದ ರೂಪ ಪಡೆದಂತಾಗಿದೆ.

— Professor Sajjad Raja (@NEP_JKGBL) January 14, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...