ಹೋಟೆಲ್ನಲ್ಲಿ ಆಹಾರ ಸೇವಿಸುತ್ತಿರುವಾಗ ಉಸಿರುಗಟ್ಟಿ ತೀವ್ರ ತೊಂದರೆ ಅನುಭವಿಸುತ್ತಿದ್ದ ಗ್ರಾಹಕನೊಬ್ಬನ ಪ್ರಾಣ ಉಳಿಸಿದ್ದಾಳೆ ಹೋಟೆಲ್ ಪರಿಚಾರಿಕೆ (ವೇಯ್ಟ್ರೆಸ್). ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪರಿಚಾರಿಕೆಗೆ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಆಗಿದ್ದೇನೆಂದರೆ, ನಾಲ್ಕು ಮಂದಿ ಹೋಟೆಲ್ಗೆ ಬಂದಿದ್ದ ಸಂದರ್ಭದಲ್ಲಿ ಆಹಾರ ಸೇವನೆ ಮಾಡಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿಗೆ ಆಹಾರ ಸೇವಿಸುತ್ತಲೇ ಉಸಿರುಗಟ್ಟಿದಂತಾಗಿದೆ. ಆತ ಕೆಮ್ಮಲು ಶುರು ಮಾಡಿದಾಗ, ಪಕ್ಕದಲ್ಲಿ ಕುಳಿತಿರುವಾತ ಆತನ ಬೆನ್ನನ್ನು ಉಜ್ಜಿದ್ದಾನೆ. ಆದರೆ ಇದರಿಂದ ಏನೂ ಪ್ರಯೋಜನ ಆಗಲಿಲ್ಲ. ಉಸಿರಾಟದ ಸಮಸ್ಯೆ ಏರುತ್ತಲೇ ಆತನ ಜತೆಗೆ ಬಂದವರು ಭಯಭೀತರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಅತ್ತ ಕಡೆ ಬಂದ ಪರಿಚಾರಿಕೆ, ಉಸಿರುಗಟ್ಟಿದ ಸಂದರ್ಭದಲ್ಲಿ ವ್ಯಕ್ತಿಯ ಜೀವ ಕಾಪಾಡಬಲ್ಲ ತುರ್ತು ಚಿಕಿತ್ಸೆಯ ಭಾಗವಾಗಿರುವ ‘ಹೈಮ್ಲಿಚ್’ ಮೂಲಕ ಆ ವ್ಯಕ್ತಿಯ ಪ್ರಾಣ ಉಳಿಸಿದ್ದಾಳೆ. ಈ ವಿದ್ಯೆಯನ್ನು ಅಲ್ಲಿ ಪ್ರಯೋಗ ಮಾಡಿ, ತೊಂದರೆಗೆ ಒಳಗಾಗಿರುವ ಗ್ರಾಹಕನ ಹೊಟ್ಟೆಯನ್ನು ಹಿಡಿದುಕೊಂಡು ಆತನನ್ನು ಮೇಲೆ-ಕೆಳಕ್ಕೆ ಮಾಡುವ ಮೂಲಕ ಪ್ರಾಣ ಕಾಪಾಡಿದ್ದಾಳೆ ಲ್ಯಾಸಿ ಗುಪ್ಟಿಲ್.
ಇಲ್ಲಿ ಕೆಲಸಕ್ಕೂ ಸೇರುವ ಮುನ್ನ ಲ್ಯಾಸಿ ಗುಪ್ಟಿಲ್, ತುರ್ತು ವೈದ್ಯಕೀಯ ತಂತ್ರಜ್ಞರಾಗಿ (EMT) ಕೆಲಸ ನಿರ್ವಹಿಸುತ್ತಿದ್ದಳು. ಅಲ್ಲಿ ಕಲಿತ ವಿದ್ಯೆಯನ್ನು ಇಲ್ಲಿ ಪ್ರದರ್ಶನ ಮಾಡುವ ಮೂಲಕ ಗ್ರಾಹಕರೊಬ್ಬರ ಜೀವ ಕಾಪಾಡಿದ್ದಾಳೆ. ಇದರ ವಿಡಿಯೋ ವೈರಲ್ ಆಗುತ್ತಲೇ ಲ್ಯಾಸಿ ಗುಪ್ಟಿಲ್ ಅವರಿಗೆ ಪ್ರಶಂಸೆಗಳ ಸುರಿಮಳೆಯೇ ಬರುತ್ತಿದೆ.