
ತಾಲಿಬಾನ್ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ.
ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರ ಇತ್ತೀಚಿನ ಟ್ವಿಟರ್ ಪೋಸ್ಟ್, ಆ ರಾಷ್ಟ್ರದಲ್ಲಿ ಪ್ರತಿಭಾವಂತ ವೃತ್ತಿಪರರು ಹೇಗೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.
ಹಕ್ಮಲ್ ಅವರು ಅಫ್ಘಾನ್ ಪತ್ರಕರ್ತ ಮೂಸಾ ಮೊಹಮ್ಮದಿ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಜೊತೆಗಿನ ಶೀರ್ಷಿಕೆಯಲ್ಲಿ, ಮೊಹಮ್ಮದಿ ಹಲವು ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದ ಭಾಗವಾಗಿದ್ದರು. ಅಫ್ಘಾನಿಸ್ತಾನದಲ್ಲಿ ಭೀಕರ ಆರ್ಥಿಕ ಪರಿಸ್ಥಿತಿಯ ನಡುವೆ ಅವರು ಈಗ ತಮ್ಮ ಜೀವನವನ್ನು ನಿಭಾಯಿಸಲು ಬೀದಿಬದಿ ಆಹಾರ ಮಾರಾಟ ಮಾಡುತ್ತಿದ್ದಾರೆ ಎಂದು ಎರಡು ಸಾಲು ಬರೆದಿದ್ದಾರೆ.
ಫಲಿತಾಂಶದ ಬಗ್ಗೆ ಅನುಮಾನವಿದ್ದವರಿಗೆ ಸ್ಕ್ಯಾನ್ ಕಾಪಿ
ಮೂಸಾ ಮೊಹಮ್ಮದಿ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದ್ದು, ಈಗ ಕುಟುಂಬವನ್ನು ಪೋಷಿಸಲು ಅವರಿಗೆ ಯಾವುದೇ ಆದಾಯವಿಲ್ಲ. ಅಲ್ಪ ಸ್ವಲ್ಪ ಹಣವನ್ನು ಗಳಿಸಲು ಬೀದಿ ಬದಿ ಆಹಾರ ಮಾರಾಟ ಮಾಡುತ್ತಾರೆ. ಸರ್ಕಾರದ ಪತನದ ಬಳಿಕ ಆಫ್ಘನ್ನರು ಭಾರೀ ಬಡತನ ಅನುಭವಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮೊಹಮ್ಮದಿ ಅವರ ಕಥೆ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆ ದೇಶದ ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಗಮನವನ್ನು ಸೆಳೆಯಿತು. ಅವರ ಟ್ವೀಟ್‌ನಲ್ಲಿ, ಮಾಜಿ ಟಿವಿ ನಿರೂಪಕನನ್ನು ತಮ್ಮ ಇಲಾಖೆಗೆ ನೇಮಿಸುವುದಾಗಿ ತಿಳಿಸಿದ್ದಾರೆ.