alex Certify ಭಾರತ – ಪಾಕ್ ಕ್ರಿಕೆಟ್ ಅಭಿಮಾನಿಗಳಿಂದ‌ ಒಟ್ಟಿಗೆ ನೃತ್ಯ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ – ಪಾಕ್ ಕ್ರಿಕೆಟ್ ಅಭಿಮಾನಿಗಳಿಂದ‌ ಒಟ್ಟಿಗೆ ನೃತ್ಯ; ವಿಡಿಯೋ ವೈರಲ್

ಭಾರತವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವಾಗ ಒಂದು ರೀತಿಯ ಟೆನ್ಶನ್ ವಾತಾವರಣ ಸೃಷ್ಟಿಯಾಗಿರುತ್ತದೆ‌. ಕ್ರಿಕೆಟ್ ಪ್ರೇಮಿಗಳ ಗಮನವೆಲ್ಲ ಪಂದ್ಯದ ಮೇಲೆಯೇ ಇರುತ್ತದೆ.

ಎರಡೂ ಕಡೆಯ ಅಭಿಮಾನಿಗಳು ತಮ್ಮ ಕಣ್ಣುಗಳನ್ನು ಟಿವಿ ಪರದೆಯ ಮೇಲೆ ಅಂಟಿಸಿಕೊಂಡು ತಾವು ಬೆಂಬಲಿಸುವ ತಂಡವನ್ನು ಗೆಲ್ಲಿಸಬೇಕೆಂದು ಪ್ರಾರ್ಥಿಸುತ್ತಿರುತ್ತಾರೆ.

ಅಕ್ಟೋಬರ್ 23 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ರೋಲರ್- ಕೋಸ್ಟರ್ ರೈಡ್‌ಗಿಂತ ಕಡಿಮೆಯಿರಲಿಲ್ಲ. ಐಸಿಸಿ ಟಿ20 ವಿಶ್ವಕಪ್‌ನ ಸೂಪರ್-12 ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹೆವಿವೇಯ್ಟ್ ಪೈಪೋಟಿಯು, ವಿಶೇಷವಾಗಿ ಭಾರತದ ಅಭಿಮಾನಿಗಳು ಪ್ರೀತಿಯಿಂದ ನೆನಪಿಸಿಕೊಳ್ಳುವಂತೆ ಫಲಿತಾಂಶ ತಂದಿತು.

ಇನ್ನು ಪಂದ್ಯದುದ್ದಕ್ಕೂ ಕೆಲವು ಗಮನಾರ್ಹ ಕ್ಷಣಗಳು ಮತ್ತು ಅದಕ್ಕೂ ಮೊದಲು ಮತ್ತು ನಂತರವೂ ಇದ್ದವು. ಅಂತಹ ಒಂದು ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆದಿದೆ. ಇದು ಭಾರತ ಮತ್ತು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಜನಪ್ರಿಯ ಹಾಡು ಪಸೂರಿಯನ್ನು ಹಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಪಾಕಿಸ್ತಾನ್ ಶೋಬಿಜ್ 123 ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಕ್ರೀಡಾಂಗಣದ ಹೊರಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಜೆರ್ಸಿಗಳನ್ನು ಧರಿಸಿ ನೃತ್ಯ ಮಾಡುತ್ತಾ ಹಾಡಿರುವ ಅಭಿಮಾನಿಗಳನ್ನು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...