
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಮೆರಿಕದ 16 ವರ್ಷದ ಬಾಲಕಿಯ ಜೀವವನ್ನು ಟಿಕ್ ಟಾಕ್ ಉಳಿಸಿದೆ. ಅಪಹರಣಕ್ಕೊಳಗಾದ ಬಾಲಕಿಯು ಟಿಕ್ಟಾಕ್ನಲ್ಲಿ ಕಲಿತ ಕೈ ಸನ್ನೆಯನ್ನು ಬಳಸಿಕೊಂಡು ಸಹಾಯ ಕೇಳಿದ್ದಾಳೆ. ಬಾಲಕಿಯನ್ನು ವಾಹನದಲ್ಲಿ ಅಪಹರಣಕಾರರು ಕರೆದುಕೊಂಡು ಹೋಗುವಾಗ ಈಕೆಯ ಕೈಸನ್ನೆ ಗಮನಿಸಿದ ವಾಹನ ಚಾಲಕನೊಬ್ಬ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಬ್ರೈಲ್ ಸ್ನೇಹಿ ಪ್ಯಾಕ್ನಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ…!
ಕೂಡಲೇ ಪೊಲೀಸರು ವಾಹನವನ್ನು ಬೆಂಬತ್ತಿದ್ದಾರೆ. ಅದಕ್ಕೂ ಮುನ್ನ ವಾಹನ ಚಾಲಕ ಕೂಡ ಅಪಹರಣಕಾರರ ವಾಹನವನ್ನು ಹಿಂಬಾಲಿಸಿದ್ದಾನೆ. ಕೊನೆಗೂ ಕಿಡ್ನಾಪರ್ಸ್ ನಿಂದ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದು, ವಿಷಯ ತಿಳಿಸಿದ ವಾಹನ ಚಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದೃಷ್ಟವಶಾತ್, ವಾಹನ ಚಾಲಕ ಬಾಲಕಿಯ ಸಂಕೇತಗಳ ಅರ್ಥಮಾಡಿಕೊಂಡಿದ್ದರಿಂದ ಬಾಲಕಿಯು ಅಪಾಯದಿಂದ ಪಾರಾಗಿದ್ದಾಳೆ.