
ಭಾರಿ ಹಿಮಪಾತ ಸಂಭವಿಸಿದ್ದರಿಂದ ಜನರು ಹೊರಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಅಂಗಡಿಯೊಳಗೆಯೇ ಉಳಿಯುವಂತಾಯ್ತು. ಡಿಸೆಂಬರ್ 1 ರ ಸಂಜೆ ಹೋಮ್ ಫರ್ನಿಶಿಂಗ್ ಸ್ಟೋರ್ ಮುಚ್ಚುವ ಮುನ್ನ ನಗರದಲ್ಲಿ ಸುಮಾರು 12 ಇಂಚುಗಳಷ್ಟು ಹಿಮ ಬಿದ್ದಿತ್ತು. ಹಠಾತ್ತನೆ ಹವಾಮಾನ ಬದಲಾಗಿದ್ದರಿಂದ 25 ಮಂದಿ ಐಕೆಇಎ ಸಿಬ್ಬಂದಿ ಮತ್ತು ಆರು ಗ್ರಾಹಕರು ಅಂಗಡಿಯೊಳಗೆ ರಾತ್ರಿ ಕಳೆಯಬೇಕಾಯ್ತು.
ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ: ಮೂರೂ ಮಾದರಿಯಲ್ಲಿ 50 ಜಯ
ಹಿಮಪಾತ ಸಂಭವಿಸಿದ ಸಂದರ್ಭದಲ್ಲಿ ಜನರ ಗುಂಪು ಭಯಗೊಂಡಿಲ್ಲ. ಅವರು ಶಾಂತಚಿತ್ತರಾಗಿ ದೂರದರ್ಶನವನ್ನು ವೀಕ್ಷಿಸಿದ್ದಾರೆ. ಅಲ್ಲಿಯೇ ಇದ್ದ ಸೋಫಾ, ಹಾಸಿಗೆ ಮೇಲೆ ಒರಗಿ ನಿದ್ದೆಗೆ ಜಾರಿಗೆ ಜಾರಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲವರು ಕಾರ್ಡ್ ಆಟಗಳನ್ನು ಆಡುತ್ತಾ ಆನಂದಿಸಿದ್ದಾರೆ. ನಂತರ ಕೆಫೆಟೇರಿಯಾದ ಆಹಾರವನ್ನು ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಕೆಲವರು ದೊಡ್ಡ ಪ್ರೊಜೆಕ್ಟರ್ ಗಳನ್ನು ಬಳಸಿ ಸಿನಿಮಾ ಮತ್ತು ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುತ್ತಾ ಆನಂದಿಸಿದ್ದಾರೆ.
ಮರುದಿನ ಬೆಳಿಗ್ಗೆ ನಿದ್ದೆಯಿಂದ ಎದ್ದ ಗುಂಪು ಸಂತೋಷದಿಂದ ಕಾಫಿ ಹಾಗೂ ದಾಲ್ಚಿನ್ನಿ ಬನ್‌ಗಳನ್ನು ಸೇವಿಸುತ್ತಾ ಅಂಗಡಿಯಿಂದ ಮಧುರವಾದ ನೆನಪುಗಳೊಂದಿಗೆ ತಮ್ಮ ದಾರಿಹಿಡಿದಿದ್ದಾರೆ.


