alex Certify ಫುಟ್​ಬಾಲ್​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದಲ್ಲೇ ಲ್ಯಾಂಡ್​ ಆದ ಸ್ಕೈಡೈವರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್​ಬಾಲ್​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದಲ್ಲೇ ಲ್ಯಾಂಡ್​ ಆದ ಸ್ಕೈಡೈವರ್..​..!

ಫುಟ್​​ಬಾಲ್​​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಮಧ್ಯದಲ್ಲೇ ಸ್ಕೈಡೈವರ್​​ ಬಂದಿಳಿದ ವಿಚಿತ್ರ ಘಟನೆ ಪೊಲ್ಯಾಂಡ್​ನಲ್ಲಿ ನಡೆದಿದೆ.

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಸ್ಕೈಡೈವರ್​ ಒಬ್ಬ ಒಲಿಂಪಿಯಾ ಎಲ್​​ಬ್ಲಾಗ್​ ಎಫ್​ಸಿ ಎರಡನೆ ತಂಡ ಹಾಗೂ ಪಿಸಾ ಪ್ರಿಮಾವೆರಾ ಬಾರ್ಕ್ಜೆವೊ ತಂಡಗಳು ಫುಟ್​ಬಾಲ್​ ಆಡುತ್ತಿದ್ದಲ್ಲೇ ಲ್ಯಾಂಡ್​ ಆಗಿದ್ದಾರೆ.

ಸ್ಕೈ ಡೈವರ್​ ಸೇಫ್​ ಆಗಿ ಲ್ಯಾಂಡ್​ ಆಗುತ್ತಿದ್ದಂತೆಯೇ ರೆಫರಿ ಆಟವನ್ನ ನಿಲ್ಲಿಸುವಂತೆ ಆಟಗಾರರಿಗೆ ಸೂಚನೆ ನೀಡಿದ್ದಾರೆ. ಬಳಿಕ ಹಳದಿ ಕಾರ್ಡ್​ನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಕೆಲ ಸಮಯಗಳ ಬಳಿಕ ಪಂದ್ಯವನ್ನ ಮತ್ತೆ ಆರಂಭಿಸಲಾಗಿದ್ದು 6-3 ಅಂತರದಲ್ಲಿ ಒಲಿಂಪಿಯಾ ಈ ಪಂದ್ಯವನ್ನ ಗೆದ್ದುಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...