ಬ್ರೇಕ್ ಅಪ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪ್ರೀತಿ ಕಳೆದುಕೊಂಡವರಿಗೆ ಮಾತ್ರ ಅದರ ನೋವು ಗೊತ್ತಾಗುತ್ತದೆ. ಬ್ರೇಕ್ ಅಪ್ ನೋವನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಸಣ್ಣ ಕಾರಣಕ್ಕೆ ದಂಪತಿ ದೂರವಾಗ್ತಾರೆ. ಆದ್ರೆ ದೂರವಾದ್ಮೇಲೆ ಮಾಜಿ ಸಂಗಾತಿ ನೆನಪು ಕಾಡುತ್ತದೆ. ಮನಃಶ್ಶಾಸ್ತ್ರಜ್ಞರು ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ.
ಆಸ್ಟ್ರೇಲಿಯಾದ ಪರ್ತ್‌ನಲ್ಲಿ ವಾಸಿಸುತ್ತಿರುವ ಕ್ಲಿನಿಕಲ್ ಸೈಕಾಲಜಿಸ್ಟ್ ಗ್ಯಾಬಿ ಗುಡಿಯರ್, ಬ್ರೇಕ್ ಅಪ್ ಗುಂಗಿನಿಂದ ಹೊರಬರುವುದು ಹೇಗೆ ಎಂಬುದನ್ನು ಹೇಳಿದ್ದಾರೆ. 5 ಸೂತ್ರಗಳನ್ನು ನೀಡಿದ್ದಾರೆ.
ಅವರ ಪ್ರಕಾರ, ಬ್ರೇಕ್ ಅಪ್ ನಂತ್ರ ಒಂಟಿಯಾಗಿರಬಾರದು. ಇದು ನೋವನ್ನು ಹೆಚ್ಚಿಸುತ್ತದೆ. ಪದೇ ಪದೇ ಮಾಜಿ ನೆನಪು ಬರುವಂತೆ ಮಾಡುತ್ತದೆ. ಬ್ರೇಕ್ ಅಪ್ ಆದ್ಮೇಲೆ ಹೆಚ್ಚಿನ ಸಮಯವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯಬೇಕು.
ಪ್ರೀತಿ ಮಾತ್ರ ಕಳೆದುಕೊಂಡಿದ್ದೀರಿ, ಜೀವನವನ್ನಲ್ಲ ಎಂಬುದು ನೆನಪಿರಲಿ. ಮನೆಯ ಕೋಣೆಯಲ್ಲಿ ಕುಳಿತು ಬೇಸರಪಟ್ಟುಕೊಳ್ಳುವ ಬದಲು ಮನೆಯಿಂದ ಹೊರಗೆ ಬನ್ನಿ. ಸೂರ್ಯನ ಬೆಳಕಿಗೆ ಮೈ ಒಡ್ಡಿ.
ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಸಮಯವನ್ನು ಕಳೆಯಿರಿ. ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಗಾತಿ ಖಾತೆಯನ್ನು ಬ್ಲಾಕ್ ಮಾಡಿ. ಯಾವುದೇ ಕಾರಣಕ್ಕೂ ಅವರು ಏನು ಮಾಡ್ತಿದ್ದಾರೆಂಬ ಬಗ್ಗೆ ಇಣುಕಿ ನೋಡುವ ಪ್ರಯತ್ನ ಮಾಡಬೇಡಿ.
ಪ್ರೀತಿ ಕಳೆದುಕೊಂಡಿದ್ದೀರೆಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ಮದ್ಯ ಸೇವನೆ ಮಾಡಬೇಡಿ. ಇದು ಜೀವನ ಸುಧಾರಿಸುವ ಬದಲು ಹಾಳು ಮಾಡುತ್ತದೆ.
ಪ್ರತಿದಿನ ಎಂಟು ಗಂಟೆ ನಿದ್ರೆ ಮಾಡಬೇಕು. ನಿದ್ರೆ ಜೊತೆಗೆ ಪ್ರತಿ ದಿನ ವ್ಯಾಯಾಮ ಮಾಡಿ. ಹಾಗೆ ಆರೋಗ್ಯಕರ ಆಹಾರವನ್ನು ಸೇವಿಸಿ.