
ಆದರೆ, ಈ ಬಾರಿ ಮ್ಯಾಗಿ ನೂಡಲ್ಸ್ ಬದಲು ಒಂದು ಗ್ಲಾಸ್ನಲ್ಲಿ ಮ್ಯಾಗಿ ಮಿಲ್ಕ್ಶೇಕ್ ಮಾಡಲಾಗಿದೆ ! ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ತರಹದ ಫೋಟೊವೊಂದು ವೈರಲ್ ಆಗಿದೆ. ಮ್ಯಾಗಿ ನೂಡಲ್ಸ್ ಪ್ರಿಯರನ್ನು ಈ ಫೋಟೊ ಕೋಪಕ್ಕೆ ದೂಡಿದೆ.
ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ ಮಗಳು: ಬಿಲ್ ನೋಡಿ ದಂಗಾದ ತಂದೆ
ಇಂಥ ಮಿಲ್ಕ್ ಶೇಕ್ ಮಾಡುವವರನ್ನು ಜೀವಂತವಾಗಿ ಬಂಧಿಸಿ, ಬಡಿಯಿರಿ ಎಂದು ಟ್ವೀಟಿಗರು ಕಿಡಿಕಾರುತ್ತಿದ್ದಾರೆ. ಎಷ್ಟೋ ಬಾರಿ ರಾತ್ರಿ ಹಸಿವಿನಿಂದ ನರಳುತ್ತಿದ್ದಾಗ ಆಪತ್ಬಾಂಧವನಾಗಿರುವ ಮ್ಯಾಗಿ ನೂಡಲ್ಸ್ ಬಗ್ಗೆ ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಹಾರಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೆ ಕೆಲವರು, ’ಬೆಂಡೆಕಾಯಿ ಪಲ್ಯದ ಪಾರ್ಲೆ ಜೀ ಬಿಸ್ಕೆಟ್ ಸ್ಯಾಂಡ್ವಿಚ್’, ’ ಪಾನ್ ಮೇಲೆ ಉದುರಿಸಲಾದ ನೂಡಲ್ಸ್-ಚೀಸ್’ ತರಹದ ವಿಚಿತ್ರ ಖಾದ್ಯಗಳ ಫೋಟೊ ಹಾಕಿ, ಇಂಥವರನ್ನು ಕೂಡ ಹಿಡಿದು ಬಡಿಯಿರಿ ಎಂದು ಆಕ್ರೋಶ ಹೊರಹಾಕಿದ್ದಾರೆ.