ಪ್ರಪಂಚವು ಲೆಕ್ಕವಿಲ್ಲದಷ್ಟು ರಹಸ್ಯಗಳಿಂದ ತುಂಬಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾನವರು ಇನ್ನೂ ನಿಸರ್ಗದ ಗುಪ್ತ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾದ ಮೀನುಗಾರರೊಬ್ಬರು ಹಿಂದೆಂದೂ ನೋಡಿರದ ಶಾರ್ಕ್ನ ದಿಗ್ಭ್ರಮೆಗೊಳಿಸುವ ಫೋಟೋವನ್ನು ಹಂಚಿಕೊಂಡ ನಂತರ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಿಡ್ನಿಯ ಮೀನುಗಾರ ಟ್ರ್ಯಾಪ್ಮ್ಯಾನ್ ಬೆರ್ಮಗುಯಿ ಅವರು ಆಳ ಸಮುದ್ರದಲ್ಲಿ ಶಾರ್ಕ್ನ ಗೊಂದಲದ ಚಿತ್ರವನ್ನು ಸೆರೆ ಹಿಡಿದು ಜನರ ಮುಂದಿಟ್ಟಿದ್ದಾರೆ. ಅದು ನೆಟ್ಟಿಗರು ತಿಳಿದ ಶಾರ್ಕ್ನ ಯಾವುದೇ ಹೋಲಿಕೆಯಂತಿರಲಿಲ್ಲ.
ಬದಲಾಗಿ, ಭಯಾನಕ ಚಿತ್ರವನ್ನು ತೋರಿಸಿದೆ. ವಿಲಕ್ಷಣವಾಗಿ ಕಾಣುವ ಶಾರ್ಕ್ನ ಮೊನಚಾದ ಮೂಗಿನೊಂದಿಗೆ ಒರಟಾದ ಚರ್ಮವನ್ನು ತೋರುವಂತಿತ್ತು. ಆ ಪ್ರಾಣಿಯ ನೀಲಿ ಕಣ್ಣುಗಳ ಒಂದು ನೋಟ ಮತ್ತು ಚಾಚಿಕೊಂಡಿರುವ, ಕಟುವಾದ ಬಿಳಿ ಹಲ್ಲುಗಳ ಒಂದು ನೋಟವು ಭಯಾನಕವಾಗಿ ಕಾಣಿಸುತ್ತದೆ.
ಈ ಫೋಟೋವನ್ನು 650 ಮೀಟರ್ ಆಳದಿಂದ ಸೆರೆಹಿಡಿದಿದ್ದೆಂದು ಅವರು ತಿಳಿಸಿದ್ದು, ಆಳ ಸಮುದ್ರದ ಶಾರ್ಕ್ ಚಿತ್ರವು ಕೆಲವೇ ಸಮಯದಲ್ಲಿ ವೈರಲ್ ಆಗಿ ಗೊಂದಲದ ದೃಶ್ಯದ ಬಗ್ಗೆ ನೆಟ್ಟಿಗರು ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.