ಟೋಕಿಯೋ: ಇತರೆ ಕ್ರೀಡಾಕೂಟಗಳಿಗಿಂತ ಒಲಿಂಪಿಕ್ಸ್ ಬಹಳ ಭಿನ್ನವಾಗಿದೆ. ಪ್ರತಿದಿನ ನೂರಾರು ಸ್ಪರ್ಧೆಗಳು ನಡೆಯುವುದರಿಂದ ಕ್ರೀಡಾಭಿಮಾನಿಗಳಿಗೆ ನಿಗಾ ಇಡುವುದು ಸ್ವಲ್ಪ ಕಷ್ಟ. ಹೀಗಾಗಿ ಅಭಿಮಾನಿಗಳಲ್ಲಿ ಉಲ್ಲಾಸ ತರಿಸಲು ಕ್ಯಾಮರಾಮ್ಯಾನ್ ಪ್ರಯತ್ನಿಸಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಹೌದು, ಟೋಕಿಯೋ ಒಲಿಂಪಿಕ್ಸ್ ಸದಾ ಒಂದಿಲ್ಲೊಂದು ಘಟನೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಸಂಭವಿಸಿದ ಹಲವಾರು ಘಟನೆಗಳು ಭಾರಿ ವೈರಲ್ ಕೂಡ ಆಗಿದೆ. ಅದರಲ್ಲಿ ಇದೀಗ ಜಿರಳೆ ಕೂಡ ಒಂದು. ಪಂದ್ಯಾವಳಿ ನೋಡುತ್ತಾ ವೀಕ್ಷರಿಗೆ ಬೇಜಾರು ಎನಿಸಿತು ಎಂದರಿತ ಕ್ಯಾಮರಾಮ್ಯಾನ್, ಮೋಜಿಗಾಗಿ ಸ್ಪರ್ಧೆ ನಡೆಯುತ್ತಿರುವ ವೇಳೆ ಜಿರಳೆ ವೇಗವಾಗಿ ಚಲಿಸುತ್ತಿರುವ ವಿಡಿಯೋ ಚಿತ್ರೀಕರಿಸಿದ್ದಾರೆ.
ಆನ್ಲೈನ್‌ನಲ್ಲಿ ದೇಶವಾಸಿಗಳ ಯೋಗಕ್ಷೇಮ ವಿಚಾರಿಸಿದ ಫೇಮಸ್ ಬಿಸ್ಕಿಟ್ ಬ್ರಾಂಡ್
ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ಮಹಿಳಾ ಹಾಕಿ ಪಂದ್ಯಾಟದ ಸಮಯದಲ್ಲಿ, ಮೈದಾನದ ಒಂದು ಭಾಗದಲ್ಲಿ ಜಿರಳೆ ಹೋಗುತ್ತಿರುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಕ್ರೀಡಾಕೂಟವನ್ನು ಪ್ರಸಾರ ಮಾಡುವ ಅರ್ಜೆಂಟೀನಾದ ಟಿವಿ ಚಾನೆಲ್ ಈ ದೃಶ್ಯವನ್ನು ನೇರಪ್ರಸಾರ ಮಾಡಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.