
ಇದೀಗ ನಮ್ಮಲ್ಲಿ ಅನೇಕರು ನೇರವಾಗಿ ಹಣ ಪಾವತಿಸುವ ಬದಲು ಡಿಜಿಟಲ್ ಪಾವತಿಯತ್ತ ಹೆಚ್ಚು ಹೆಚ್ಚು ಮೊರೆ ಹೋಗುತ್ತಿದ್ದಾರೆ. ದಿನನಿತ್ಯದ ಪಾವತಿಗಾಗಿ ಪ್ರತಿಯೊಬ್ಬರೂ ತಮ್ಮ ಚೀಲಗಳಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಸಂಗ್ರಹಿಸುವ ದಿನಗಳು ಕಳೆದುಹೋಗಿವೆ. 20,10 ರೂ.ಗೂ ಹಲವು ಮಂದಿ ಡಿಜಿಟಲ್ ಮುಖಾಂತರವೇ ಪಾವತಿ ಮಾಡುತ್ತಾರೆ. ನಮ್ಮ ದೇಶದ ವಿವಿಧ ವರ್ಗಗಳ ಜನರಲ್ಲಿ ಡಿಜಿಟಲ್ ಪಾವತಿ ಹೇಗೆ ಜನಪ್ರಿಯವಾಗಿದೆ ಎಂಬುದಕ್ಕೆ ಉದಾಹರಣೆಯಂತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಪೂಜೆ ಮಾಡಿರುವ ಬಸವನನ್ನು (ಗೋವು) ಹಿಡಿದುಕೊಂಡು ಬೀದಿಬೀದಿಗೆ ಅಲೆಯುವ ಪ್ರದರ್ಶನಕಾರರಿಗೆ ಜನರು, 20 ರೂ. 10 ರೂ., 100 ಹೀಗೆ ದೇಣಿಗೆ ನೀಡುವುದು ಸರ್ವೇ ಸಾಮಾನ್ಯವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಸವನ ತಲೆ ಮೇಲೆ ಯುಪಿಐ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.
ಬಸವ ವರ್ಣರಂಜಿತ ಸೀರೆಗಳನ್ನು ಧರಿಸಿದ್ದರೆ, ಪ್ರದರ್ಶಕ ವಾದ್ಯ ನುಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಸವನ ಕೊಂಬು ಹಾಗೂ ಗೊರಸುಗಳ ಸುತ್ತಲೂ ಹೂವುಗಳನ್ನು ಕಟ್ಟಲಾಗಿದೆ. ಗೋವಿನ ತಲೆಯಲ್ಲಿ ಯುಪಿಐ ಸ್ಕ್ಯಾನಿಂಗ್ ಕೋಡ್ ಅನ್ನು ಇಡಲಾಗಿದೆ.
ಭಾರತದಲ್ಲಿ ಡಿಜಿಟಲ್ ಪಾವತಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿವರ್ತನೆಯಾಗಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆಗಳು ಬೇಕೇ ಎಂದು ಉದ್ಯಮಿ ಆನಂದ್ ಮಹೀಂದ್ರಾ ಬರೆದಿದ್ದಾರೆ.