ಅನೇಕ ಬಾರಿ ನಾವು ಅಂದುಕೊಳ್ಳುವುದು ಒಂದು. ಆಗುವುದು ಇನ್ನೊಂದು. ಕನಸಿನಲ್ಲಿ ಕಾಣದ ಘಟನೆ ಕೆಲವೊಮ್ಮೆ ವಾಸ್ತವದಲ್ಲಿ ನಡೆಯುತ್ತದೆ. ಅಮೆರಿಕಾದಲ್ಲಿ 20 ಡಾಲರ್ ಅಂದ್ರೆ 1400 ರೂಪಾಯಿಯ ನಾಣ್ಯ ಕೋಟಿ ರೂಪಾಯಿಗೆ ಹರಾಜಾಗಿದೆ. ನಾಣ್ಯದ ಮಹತ್ವ ಗೊತ್ತಾಗ್ತಿದ್ದಂತೆ ಬೆಲೆ ಹೆಚ್ಚಾಗಿದೆ.
ಸಿಕ್ಕ ಸಿಕ್ಕ ಮಾತ್ರೆ ಸೇವಿಸುವ ಮೊದಲು ಈ ವಿಡಿಯೋ ನೋಡಿ
ನ್ಯೂಯಾರ್ಕ್ ನಲ್ಲಿ ಮಂಗಳವಾರ 1933ರ ಡಬಲ್ ಈಗಲ್ ಬಂಗಾರದ ನಾಣ್ಯದ ಹರಾಜು ನಡೆದಿದೆ. ಈ ನಾಣ್ಯ ಈವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಸಾಮಾನ್ಯವಾಗಿ ಕಾಣುವ ಈ ನಾಣ್ಯ ಕೊನೆಯದಾಗಿ 138 ಕೋಟಿಗೆ ಮಾರಾಟವಾಗಿದೆ. ರಾಯಿಟರ್ಸ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಡಬಲ್ ಈಗಲ್ ಗೋಲ್ಡ್ ಕಾಯಿನ್ ಜೊತೆ ವಿಶ್ವದ ಅಪರೂಪದ ಟಿಕೆಟ್ ಸುಮಾರು 60 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಇದೆಂಥ ನೀಚ ಕೃತ್ಯ…! ಆಸ್ಪತ್ರೆಯಲ್ಲೇ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನ
ಕಾನೂನು ಬದ್ಧವಾಗಿ ಈ ನಾಣ್ಯ ಖಾಸಗಿ ಕೈನಲ್ಲಿತ್ತು. ಈ ನಾಣ್ಯ 70ರಿಂದ 100 ಕೋಟಿ ರೂಪಾಯಿಗೆ ಮಾರಾಟವಾಗುವ ನಿರೀಕ್ಷೆಯಿತ್ತು. ಆದ್ರೆ ಈ ನಾಣ್ಯ ದಾಖಲೆ ಬರೆದಿದೆ. ಶೂ ಡಿಸೈನರ್ ಮತ್ತು ಸಂಗ್ರಾಹಕ ಸ್ಟುವರ್ಟ್ ವೈಟ್ಜ್ಮನ್ 2002 ರಲ್ಲಿ ಸುಮಾರು 55 ಕೋಟಿಗಳಿಗೆ ಇದನ್ನು ಖರೀದಿಸಿದ್ದರು.