alex Certify ಕೆಮಿಸ್ಟ್ರಿ ಪೇಪರ್‌ ಪ್ಲೇಟ್‌ನಲ್ಲಿ ಬಿಸಿ ಬಿಸಿ ಕಚೋರಿ….! ತಿನ್ಬೇಕೋ ಉತ್ತರ ಬರೆಯಬೇಕೋ ಅಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಮಿಸ್ಟ್ರಿ ಪೇಪರ್‌ ಪ್ಲೇಟ್‌ನಲ್ಲಿ ಬಿಸಿ ಬಿಸಿ ಕಚೋರಿ….! ತಿನ್ಬೇಕೋ ಉತ್ತರ ಬರೆಯಬೇಕೋ ಅಂದ ನೆಟ್ಟಿಗರು

ಕಡಲೆಪುರಿ, ಬಜ್ಜಿ, ಬೋಂಡಾ ಇವುಗಳನ್ನ ಕಟ್ಟಿಕೊಡುವ ಪೊಟ್ಟಣದ ಪೇಪರ್‌ನ್ನ ಯಾವತ್ತಾದ್ರೂ ಗಮನಿಸಿದ್ದೀರಾ ? ಯಾವುದೋ ಕಥೆ, ಯಾವುದೋ ಹಳೆಯ ನೆನಪು ಹಚ್ಚಹಸಿರನ್ನಾಗಿ ಮಾಡುತ್ತೆ. ಕೆಲವರಿಗಂತೂ ಓದುವ ಅಭ್ಯಾಸ ಶುರುವಾಗಿದ್ದೇ, ಹಾಗೆ ಪಾರ್ಸಲ್ ಮಾಡಿಕೊಡೊ ಪೇಪರ್‌ಗಳಿಂದ. ಇತ್ತೀಚೆಗೆ ಇದೇ ರೀತಿಯ ಪೇಪರ್‌ ಪ್ಲೇಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶೇಷ ಏನಂದ್ರೆ, ಅದು ಅಂತಿಂಥ ಪೇಪರ್‌ ಪ್ಲೇಟ್ ಅಲ್ಲ. ಕೆಮೆಸ್ಟಿ ಕ್ವಶ್ಚನ್ ಪೇಪರ್‌ ಪ್ಲೇಟ್.

ರಾಜಸ್ತಾನದ ಕೋಟಾ ಜಂಕ್ಷನ್‌ನಲ್ಲಿ ವ್ಯಾಪಾರಿಯೊಬ್ಬ ಕೆಮಿಸ್ಟ್ರಿ ಪ್ರಶ್ನೆಪತ್ರಿಕೆಯಿಂದ ಕೂಡಿದ ಪೇಪರ್ ಪ್ಲೇಟ್‌ನಲ್ಲಿ ಬಿಸಿ-ಬಿಸಿ ಕಚೋರಿಗಳನ್ನು ಹಾಕಿಕೊಟ್ಟಿದ್ದಾನೆ. ಅದೇ ಫೋಟೋ ಈಗ ವೈರಲ್ ಆಗಿದೆ.

ಅನುಷ್ಠಾ ಅನ್ನುವವರು ಈ ಫೋಟೋವನ್ನ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವಿಟ್ಟರ್ ಪೋಸ್ಟ್‌ನ್ನ ನೋಡಿ, ಅನೇಕರು ತಮ್ಮ ಐಐಟಿ ಕೋಚಿಂಗ್ ದಿನಗಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಈ ಫೋಟೋ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರೋ ಅನುಷ್ಠಾ ಅವರು ಶೀರ್ಷಿಕೆಯಲ್ಲಿ “ಕೋಟಾದಲ್ಲಿ ಕಚೋರಿ ತಿನ್ನಬೇಕಾದರೂ ಓದಿಕೊಂಡೇ ತಿನ್ಬೇಕು” ಎಂದು ಬರೆದಿದ್ದಾರೆ. ಇದಕ್ಕೆ ಕಾಮೆಂಟ್‌ಬಾಕ್ಸ್‌ನಲ್ಲಿ ನೆಟ್ಟಿಗರೊಬ್ಬರು “ಕೋಟಾದ ಕಚೋರಿ ಮಾರುವವರಿಗೆ ಡಿಫೆನ್ಸಿಯೇಷನ್ ಇಂಟಿಗ್ರೇಷನ್ ಬರುತ್ತದೆ’ ಬರೆದಿದ್ದಾರೆ.

ಅದೇ ರೀತಿ ಮತ್ತೋರ್ವರು ‘ಅಣ್ಣಾ ಒಂದು ಪ್ಲೇಟ್ ಆರ್ಗಾನಿಕ್ ಕಚೋರಿ ಕೊಡಿ’ ಎಂದು ಲೇವಡಿ ಮಾಡಿದ್ದಾರೆ. ಹೀಗೆಯೇ ಅನೇಕರು ತಮ್ಮ ತಮ್ಮದೇ ರೀತಿಯಲ್ಲಿ ಕಾಮೆಂಟ್ ಬರೆದಿದ್ದಾರೆ. ಸಖತ್ ಫನ್ನಿ ಆಗಿದ್ದ ಕಾಮೆಂಟ್ ಅಂದ್ರೆ, ಈ ಪ್ರಶ್ನೆ ಪತ್ರಿಕೆಗಾಗಿಯಾದರೂ ಕಚೋರಿ ಆರ್ಡರ್ ಮಾಡಬೇಕು ಅಂದಿದ್ದಾರೆ. ಈ ಕಾಮೆಂಟ್‌ಗೆ ಪ್ರತ್ಯುತ್ತರವಾಗಿ, ಇದೆಲ್ಲ ಓದಿದ ಮೇಲೆ ನಿದುಗೆ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಇರುವ ಪ್ಲೇಟ್ ನೋಡಬೇಕು ಅನ್ನಿಸುತ್ತಿದೆಯೋ, ಕಚೋರಿ ತಿನ್ನಬೇಕು ಅನ್ನಿಸುತ್ತಿದೆಯೋ?‌ ಅಂತ ಮರುಪ್ರಶ್ನೆ ಮಾಡಿದ್ದಾರೆ.

— Anushka (@Kulfei) January 12, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...