ಭಾರತದಲ್ಲಿ ಇ-ಕಾಮರ್ಸ್ ದೈತ್ಯರು ಹಬ್ಬದ ಸಮಯದಲ್ಲಿ ದೇಶಾದ್ಯಂತ ಗ್ರಾಹಕರಿಂದ ಲಕ್ಷಾಂತರ ಆರ್ಡರ್‌ಗಳನ್ನು ಪಡೆಯುತ್ತಾರೆ. ಏಕೆಂದರೆ ಈ ಸಮಯದಲ್ಲಿ ಹೆಚ್ಚಿನ ವೆಬ್‌ಸೈಟ್‌ಗಳು ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತವೆ. ಆದರೆ, ಭಾರಿ ರಿಯಾಯಿತಿಗಳ ಜೊತೆಯಲ್ಲಿ ತಡವಾಗಿ ವಿತರಣೆ, ತಪ್ಪು ವಿತರಣೆ ಮುಂತಾದವು ಸಂಭವಿಸುತ್ತದೆ.
ಇಂಥದ್ದೇ ಘಟನೆಯನ್ನು ಗ್ರಾಹಕರೊಬ್ಬರು ಎದುರಿಸಿದ್ದಾರೆ.
KPTCL ನಿಂದ ಭರ್ಜರಿ ಗುಡ್ ನ್ಯೂಸ್: 1878 ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಆಪಲ್ ಫೋನ್ ಅನ್ನು ಆರ್ಡರ್ ಮಾಡಿದ ಗ್ರಾಹಕ ವಿತರಿಸಿದ ಪ್ಯಾಕೇಜ್ ಅನ್ನು ತೆರೆದಾಗ ಆಘಾತಕ್ಕೊಳಗಾಗಿದ್ದಾರೆ. ಭಾರಿ ರಿಯಾಯಿತಿ ಘೋಷಿಸಿದ್ದ ಐಫೋನ್ 12 ಅನ್ನು ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದಾರೆ. ತನಗೆ ಬಂದ ಪ್ಯಾಕೇಜ್ ಅನ್ನು ತೆರೆದು ನೋಡಿದಾಗ ಅವರು ಶಾಕ್ ಆಗಿದ್ದಾರೆ. ಯಾಕೆಂದರೆ ಅದರಲ್ಲಿದ್ದದ್ದು 5 ರೂ. ಮೌಲ್ಯದ ನಿರ್ಮಾ ಸೋಪ್ ಆಗಿತ್ತು.
ಸಿಮ್ರನ್ ಪಾಲ್ ಸಿಂಗ್ ಅವರು 51,999 ರೂಪಾಯಿಗೆ ಫೋನ್ ಅನ್ನು ಬುಕ್ ಮಾಡಿದ್ದರು. ಪ್ಯಾಕೇಜ್ ತೆರೆದಾಗ, ಒಳಗೆ ಎರಡು ಸೋಪ್ ಬಾರ್‌ಗಳನ್ನು ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ. ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.
ನವರಾತ್ರಿ ವಿಶೇಷ: ತರಕಾರಿ, ಹಣ್ಣು, ತೆಂಗಿನ ಕಾಯಿಯಿಂದಲೇ ಅಲಂಕಾರಗೊಳ್ತಾಳೆ ಈ ದೇವಿ
ಇನ್ನು, ಅಂತಿಮವಾಗಿ ಫ್ಲಿಪ್‌ಕಾರ್ಟ್ ಆದೇಶವನ್ನು ರದ್ದು ಮಾಡಿ ಮತ್ತು ಸಿಂಗ್ ಅವರ ಹಣವನ್ನು ಮರುಪಾವತಿ ಮಾಡಿದೆ. ಘಟನೆ ನಡೆದ ಕೆಲ ದಿನಗಳ ನಂತರ ಆತನ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ವರದಿಯಾಗಿದೆ.
ಕೆಲವು ತಿಂಗಳ ಹಿಂದೆ, ಇ-ಕಾಮರ್ಸ್ ಸೈಟ್‌ನಿಂದ ರಿಮೋಟ್ ಕಂಟ್ರೋಲ್ ಕಾರನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ ಬಂದಿತ್ತು ಎಂದು ಹೇಳಲಾಗಿದೆ.