ಸೂಪರ್ಮ್ಯಾನ್ನಂತೆ ಉಡುಗೆಯನ್ನ ಧರಿಸಿದ ಕಾಮಿಡಿಯನ್ ಒಬ್ಬ ತನ್ನ ಶಕ್ತಿ ಪ್ರದರ್ಶನ ಮಾಡಲು ಚಲಿಸುತ್ತಿದ್ದ ಬಸ್ನ್ನು ನಿಲ್ಲಿಸಲು ಹೋಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ.
ಲ್ಯೂಜ್ ರಿಬೈರೋ ಎಂಬಾತ ಸೂಪರ್ಮ್ಯಾನ್ನಂತೆ ತಯಾರಾಗಿ ಬ್ರೆಜಿಲ್ನ ಬಾರ್ರಾ ಡೋಸ್ ಕೊಕ್ವೇರೋಸ್ ಎಂಬಲ್ಲಿ ತನ್ನ ಶಕ್ತಿಯನ್ನ ಪ್ರದರ್ಶಿಸೋಕೆ ಮುಂದಾಗಿದ್ದ.
ಚಲಿಸುತ್ತಿದ್ದ ವಾಹನವನ್ನ ಅಡ್ಡಗಟ್ಟಿ ತನ್ನ ಸೂಪರ್ ಶಕ್ತಿಯನ್ನ ಜಗತ್ತಿಗೇ ತೋರಿಸೋದು ಈತನ ಗುರಿಯಾಗಿತ್ತು.
ಇದಕ್ಕಾಗಿ ಸೆಲ್ಫಿ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸುತ್ತಾ ನನ್ನ ದೇಹ ಲೋಹದಿಂದ ಮಾಡಲ್ಪಟ್ಟಿದೆ ಎಂದು ಹೇಳಿಕೊಳ್ತಿದ್ದ.
ಆದರೆ ಹಿಂದಿನಿಂದ ಬಂದ ಬಸ್ವೊಂದು ಈತನಿಗೆ ಡಿಕ್ಕಿ ಹೊಡೆದಿದೆ. ಆದರೂ ಕೂಡ ಏನೂ ಆಗಲೇ ಇಲ್ಲ ಎಂಬಂತೆ ಲ್ಯೂಜ್ ನಟಿಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://youtu.be/LoQRhzttR6s?t=7