ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಕೊಯ್ದು, ಆಕೆ ಸಾಯುತ್ತಿರುವ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದಾನೆ. ನಾಗರಿಕರು ಬೆಚ್ಚಿಬೀಳೋ ಈ ವಿಡಿಯೋ ವೈರಲ್ ಆಗ್ತಿದೆ.
ಜಬಲ್ಪುರದ ರೆಸಾರ್ಟ್ನ ಕೊಠಡಿಯಲ್ಲಿ 25 ವರ್ಷದ ಮಹಿಳೆಯ ರಕ್ತಸಿಕ್ತ ನಗ್ನ ದೇಹವು ಪತ್ತೆಯಾದ ಮೂರು ದಿನಗಳ ನಂತರ, ಆಕೆಯನ್ನು ಕೊಲೆ ಮಾಡಿದ ವ್ಯಕ್ತಿ ಚಿತ್ರೀಕರಿಸಿದ ಭಯಾನಕ ವೀಡಿಯೊ ವೈರಲ್ ಆಗಿದೆ.
ಪುರುಷನೊಬ್ಬ ‘ಬೇವಾಫೈ ನಹೀ ಕರ್ನೆ ಕಾ (ನಂಬಿಕೆ ದ್ರೋಹ ಮಾಡಬೇಡ)’ ಎಂದು ಕಿರುಚುತ್ತಿರುವುದನ್ನು ಮತ್ತು ಆಕೆಯ ಗಂಟಲು ಸೀಳಿದಿರುವುದನ್ನು ಬಹಿರಂಗಪಡಿಸಲು ಹಾಸಿಗೆಯಲ್ಲಿ ಮಲಗಿರುವ ಮಹಿಳೆಯ ಮೇಲಿನ ಕಂಬಳಿ ತೆಗೆಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಸೆಲ್ಫಿ ವೀಡಿಯೋವನ್ನು ಅವನು ಆಕೆಯ ಗಂಟಲು ಕತ್ತರಿಸಿದ ನಂತರ ತೆಗೆದುಕೊಳ್ಳಲಾಗಿದೆ. ವಿಡಿಯೋ ಮಾಡಿಕೊಳ್ಳುತ್ತಿರುವ ವೇಳೆ ಆಕೆ ಇನ್ನೂ ಕೊನೆಯುಸಿರೆಳೆಯುತ್ತಿರುವುದು ಕಾಣುತ್ತದೆ.
ವಿಡಿಯೋದಲ್ಲಿ ನೆಲದ ಮೇಲೆ ಮತ್ತು ಗೋಡೆಗಳ ಮೇಲೆ ರಕ್ತ ಬಿದ್ದಿರುವುದನ್ನು ನೋಡಬಹುದು. ಮಹಿಳೆ ಏದುಸಿರು ಬಿಡುತ್ತಿರುವುದನ್ನು ಕಾಣಬಹುದು. ಈ ಭಯಾನಕ ವಿಡಿಯೋವನ್ನು ಕೊಲೆಗಾರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದಾನೆ. ಕೊಲೆ ಆರೋಪಿ ಇನ್ನೂ ಸಿಕ್ಕಿಲ್ಲ.