ವ್ಯಕ್ತಿಯೊಬ್ಬ ಸುರಂಗಮಾರ್ಗದ ಪಾದಚಾರಿ ಮಾರ್ಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಇದಕ್ಕೆ ಕಾರಣ, ಈ ಪುಣ್ಯಾತ್ಮ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೇ, ಅದನ್ನು ತಲೆಗೂ ಹಚ್ಚಿಕೊಂಡಿದ್ದಾನೆ!
ಅತ್ತ ಇತ್ತ ನೋಡುತ್ತಾ ಮೂತ್ರ ವಿಸರ್ಜಿಸಿದ ಈ ವ್ಯಕ್ತಿ ಯಾವುದೇ ಅಳುಕು ಇಲ್ಲದೇ ಮೂತ್ರವನ್ನು ಕೈಯಿಂದ ಹಿಡಿದು ತಲೆಗೆ ಹಚ್ಚಿಕೊಂಡಿದ್ದಾನೆ. ಇನ್ನೂ ಅಸಹ್ಯ ಎಂದರೆ, ಅದೇ ಮೂತ್ರದಿಂದ ಮುಖವನ್ನೂ ಒರೆಸಿಕೊಂಡಿದ್ದಾನೆ!
ಮೂತ್ರದಲ್ಲಿ ಕೆಲವೊಂದು ಔಷಧೀಯ ಗುಣಗಳು ಇರುತ್ತವೆ ಎಂದು ಹೇಳಲಾಗುತ್ತಿದೆ. ಸ್ವಯಂ ಮೂತ್ರವನ್ನು ಕುಡಿಯುವವರ ಬಗ್ಗೆಯೂ ಅಲ್ಲಲ್ಲಿ ಕೇಳುತ್ತಿದ್ದೇವೆ. ಆದರೆ ಅದನ್ನು ಕಣ್ಣಾರೆ ನೋಡಿಲ್ಲದ ಕಾರಣ, ನಿಜವೋ ಸುಳ್ಳೋ ಎಂದು ತಿಳಿಯುವುದುಕ ಕಷ್ಟ. ಆದರೆ ಈಗ ಈ ವಿಡಿಯೋವನ್ನು ಕಣ್ಣಾರೆ ಕಂಡವರು ಮಾತ್ರ ಛೀ ಥೂ ಎನ್ನುತ್ತಿದ್ದಾರೆ!
https://twitter.com/TheBest_Viral/status/1585389421960237056?ref_src=twsrc%5Etfw%7Ctwcamp%5Etweetembed%7Ctwterm%5E1585389421960237056%7Ctwgr%5E64653c25ed40e651bcba3cd8b8c0d1adc9f163ec%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-man-applies-urine-to-hair-wipes-face-with-same-hands-internet-is-disgusted-6261661.html