
ಇಂಡಿಯನ್ ವೈಲ್ಡ್ ಲೈಫ್ ಹೆಸರಿನ ಫೇಸ್ ಬುಕ್ ಗ್ರೂಪ್ ನಲ್ಲಿ ಫೋಟೋಗಳನ್ನು ಮೊದಲು ಹಂಚಿಕೊಳ್ಳಲಾಗಿದೆ. ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ನಂತರ ಅವುಗಳ ಫೋಟೋ ಕ್ಲಿಕ್ಕಿಸಲಾಗಿದೆ ಎಂದು ಹೇಳಲಾಗಿದೆ.
ರಾಜೇಂದ್ರ ಸೆಮಾಲ್ಕರ್ ಎಂಬ ಬಳಕೆದಾರರು ಅಮರಾವತಿ ಜಿಲ್ಲೆಯ ಹರಿಸಾಲ್ ಅರಣ್ಯದಲ್ಲಿ ಮರದ ಕಾಂಡದ ಸುತ್ತಲೂ ಮೂರು ಕರಿ ನಾಗರಹಾವುಗಳು ಜೊತೆಗೆ ಸುತ್ತಿಕೊಂಡಿರುವುದನ್ನು ತೋರಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋಗೆ ಪೋಸ್ ಕೊಡುವ ರೀತಿಯಲ್ಲಿ ಮೂರು ನಾಗರಹಾವುಗಳು ಹೆಡೆಯೆತ್ತಿ ನಿಂತಿದ್ದು, ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಅದರಲ್ಲಿ ಒಂದು ಫೋಟೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೂರು ಕಪ್ಪು ನಾಗರಹಾವುಗಳು ಮರದ ಕಾಂಡದ ಸುತ್ತಲೂ ಸುತ್ತುತ್ತಿರುವಾಗ ತಮ್ಮ ಹೆಡೆಯೆತ್ತಿ ನಿಂತಿವೆ. ಹಲವಾರು ಮಂದಿ ಈ ಫೋಟೋಗೆ ಲೈಕ್, ಕಾಮೆಂಟ್ ಗಳನ್ನು ಮಾಡಿದ್ದಾರೆ.
ಒಬ್ಬ ಬಳಕೆದಾರರು, ಮೂರು ಕಪ್ಪು ಸುಂದರಿಯರು ಬಹಳ ಚೆನ್ನಾಗಿ ಕಾಣಿಸುತ್ತಿದ್ದಾರೆ. ಆದರೆ ದೂರದಿಂದ ಮಾತ್ರ, ಹತ್ತಿರದಿಂದ ನೋಡಿದ್ರೆ ಭಯದಿಂದ ಬೆವರಬಹುದು ಎಂಬಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.