ಉತ್ತರ ಪ್ರದೇಶದ ರಾಯ್‌ಬರೇಲಿಯ ಶಾಲೆಯೊಂದರಲ್ಲಿ ಭಾನುವಾರ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಶಾಲಾ ಬಸ್‌ನಿಂದ ಬೃಹತ್ ಹೆಬ್ಬಾವನ್ನು ರಕ್ಷಿಸಿದ ಘಟನೆ ನಡೆದಿದೆ.
ಬೃಹತ್ ಹೆಬ್ಬಾವು ರಾಯ್‌ಬರೇಲಿಯ ರಿಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಸೇರಿದ ಶಾಲಾ ಬಸ್‌ನಲ್ಲಿ ಸೇರಿಕೊಂಡಿತ್ತು.
ಮಾಹಿತಿ ಪಡೆದ ಅರಣ್ಯ ಇಲಾಖೆಯ ರಕ್ಷಕರ ತಂಡ ಸ್ಥಳಕ್ಕೆ ಆಗಮಿಸಿ ದೊಡ್ಡ ಗಾತ್ರದ ಹಾವನ್ನು ರಕ್ಷಿಸಿದೆ. ಭಾನುವಾರವಾದ್ದರಿಂದ ಶಾಲೆಯನ್ನು ಮುಚ್ಚಲಾಗಿತ್ತು ಮತ್ತು ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ.
ರಕ್ಷಕರು ಹಾವನ್ನು ಸುರಕ್ಷಿತವಾಗಿ ರಕ್ಷಿಸುವ ಸಲುವಾಗಿ ಕೋಲಿನಿಂದ ಚುಚ್ಚುತ್ತಿರುವಾಗ ಹೆಬ್ಬಾವು ಸೀಟಿನ ಕೆಳಗೆ ಕಾಣಿಸಿಕೊಂಡಿತು ಇದರ ವೀಡಿಯೊಗಳು ವೈರಲ್ ಆಗುತ್ತಿವೆ, ಎಷ್ಟೇ ಹೊರತರಲು ಪ್ರಯತ್ನಿಸಿದರೂ ಹಾವು ಬಸ್ ಬಿಟ್ಟು ಬರಲು ಸತಾಯಿಸಿತು. ಕೊನೆಗದನ್ನು ಬಲವಂತವಾಗಿ ಕೆಳಗಿಳಿಸಲಾಯಿತು.