ಭೂತ, ಪ್ರೇತ. ಕೆಲವರು ಇದ್ರ ಬಗ್ಗೆ ಹೇಳಿದ್ರೆ ನಗ್ತಾರೆ. ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭೂತ, ದೆವ್ವಗಳನ್ನು ನಂಬುವವರಿದ್ದಾರೆ. ಐರ್ಲೆಂಡ್‌ನ ಮೇಯೋ ಕೌಂಟಿಯ ಹಳೆಯ ಭವನದಲ್ಲಿ ದೆವ್ವವಿದೆ ಎಂದು ಕೆಲ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇಲ್ಲಿನ ಮೂರ್ರೆ ಹಾಲ್ ನಿಂದ ಚಿತ್ರವಿಚಿತ್ರ ಶಬ್ಧ ಬರುತ್ತದೆಯಂತೆ. ಈ ಜಾಗದ ಬಗ್ಗೆ ಅನೇಕ ಕಥೆಗಳಿವೆ. ಈ ಕಥೆಗಳನ್ನು ಕೇಳಿದ ಪ್ಯಾರಾನಾರ್ಮಲ್ ಸೂಪರ್ ನ್ಯಾಚುರಲ್ ಟೀಂ ಅಲ್ಲಿಗೆ ಭೇಟಿ ನೀಡುವ ನಿರ್ಧಾರ ಕೈಗೊಂಡಿತ್ತು.
ಈ ಆಸ್ತಿ ಪ್ರಖ್ಯಾತ ಐರಿಶ್ ಬರಹಗಾರ ಜಾರ್ಜ್ ಮೂರೆಗೆ ಸೇರಿದ್ದಾಗಿತ್ತಂತೆ. ಕೊನಾಚ್ಟ್ ಗಣರಾಜ್ಯದ ಮಾಜಿ ಅಧ್ಯಕ್ಷ ಜಾನ್ ಮೂರೆ ಅವರ ಪೂರ್ವಜರ ಮನೆಯಾಗಿತ್ತಂತೆ. ಐರ್ಲೆಂಡ್‌ನಲ್ಲಿ ಯುದ್ಧವಾದ ಸಂದರ್ಭದಲ್ಲಿ ಈ ಮಹಲ್ ನ ಹಾಲ್ ಸುಟ್ಟು ಹೋಗಿತ್ತಂತೆ. ಅದನ್ನು ಎಂದೂ ನವೀಕರಿಸಲು ಸಾಧ್ಯವಾಗಲಿಲ್ಲವಂತೆ.
ಇಲ್ಲಿ ಆತ್ಮವಿದ್ದು, ಮಹಲ್ ಗೆ ಹೋಗಲು ಬಿಡುವುದಿಲ್ಲವೆಂಬ ಕಥೆಯಿದೆ. ಆದ್ರೆ ಪಿಎಸ್‌ಐ ತಂಡ ಅಲ್ಲಿಗೆ ಭೇಟಿ ನೀಡಿದಾಗ ಸ್ಥಳ ಶಾಂತವಾಗಿತ್ತಂತೆ. ಈ ಸದಸ್ಯರು ಯಾವುದೇ ಇಂಥ ಜಾಗಕ್ಕೆ ಹೋದಾಗ ಮೊದಲು ಫೋಟೋ ತೆಗೆಯುತ್ತಾರಂತೆ. ಅಲ್ಲಿ ಯಾವುದೇ ಶಕ್ತಿಯಿದ್ದರೂ ಅದು ಅಲ್ಲಿ ನಿಲ್ಲುವುದಿಲ್ಲವೆಂದು ತಂಡದ ಸದಸ್ಯರು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
ಮೂರೆ ಹಾಲ್ ನಲ್ಲಿ ಫೋಟೋ ತೆಗೆಯುತ್ತಿದ್ದಂತೆ ಕಿಟಕಿ ಬಳಿ ಭಯಾನಕ ಆಕೃತಿ ಕಾಣಿಸಿಕೊಂಡಿತ್ತಂತೆ. ಆದ್ರೆ ರಾತ್ರಿಯಾಗ್ತಿದ್ದಂತೆ ಇಂಥಹ ಚಟುವಟಿಕೆ ಕಡಿಮೆಯಾಗಿತ್ತಂತೆ. ಅಗೋಚರ ಶಕ್ತಿ ಇರುವ ಬಗ್ಗೆ ಸಾಕಷ್ಟು ಸಾಕ್ಷ್ಯ ಸಿಕ್ಕಿದೆ. ಇನ್ನಷ್ಟು ತನಿಖೆ ನಡೆಯಬೇಕಿದೆ ಎಂದು ತಂಡ ಹೇಳಿದೆ. ಪಿಎಸ್‌ಐನ ಈ ಫೇಸ್ಬುಕ್ ಪೋಸ್ಟ್ ಗೆ ಜನರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.