ಪಂದ್ಯದ ಸಮಯದಲ್ಲಿ ಫುಟ್ಬಾಲ್ ಅಭಿಮಾನಿಯೊಬ್ಬ ಹೃದಯಾಘಾತಕ್ಕೆ ಒಳಗಾದ ಘಟನೆ ನಡೆದಿದೆ. ತಕ್ಷಣವೇ ಆಟಗಾರರು, ದಾದಿಯರು ಮತ್ತು ವೈದ್ಯರು ಆತನ ರಕ್ಷಣೆಗೆ ಧಾವಿಸಿದ್ದಾರೆ.
ಪ್ರೀಮಿಯರ್ ಲೀಗ್ ಪಂದ್ಯದ ಸಮಯದಲ್ಲಿ, ಅವರ ತಂಡದ ಆಟವನ್ನು ನೋಡುವಾಗ ಅಭಿಮಾನಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್, ವೈದ್ಯರು ಮತ್ತು ದಾದಿಯರು ಆತನ ರಕ್ಷಣೆಗೆ ಓಡೋಡಿ ಬಂದಿದ್ದು, ಅಭಿಮಾನಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಜೆ ಕಡಿತವಾಗಿ ಭಾನುವಾರವೂ ಶಾಲೆ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಸಂಡೇ ನೋ ಕ್ಲಾಸ್, ಪಠ್ಯ ಕಡಿತ ಇಲ್ಲ
ಅಭಿಮಾನಿಗೆ ಹೃದಯಾಘಾತವಾದಾಗ ಡಾ. ಟಾಮ್ ಪ್ರಿಟ್ಚರ್ಡ್ ಮತ್ತು ಅವನ ಸ್ನೇಹಿತ ಮ್ಯಾಥ್ಯೂ ಆಂಡರ್ಸನ್ ಇಬ್ಬರೂ ಆಟದಲ್ಲಿದ್ದರು. ಈ ವೇಳೆ ಹೃದಯಾಘಾತಕ್ಕೊಳಗಾದ ಅಭಿಮಾನಿಗೆ ಸಹಾಯ ಮಾಡಲು ಓಡೋಡಿ ಬಂದಿದ್ದಾರೆ. ಆ ಸಮಯದಲ್ಲಿ, ಎಲ್ಲರ ಕಣ್ಣುಗಳು ಅಭಿಮಾನಿಯ ಮೇಲೆ ಇದ್ದಿದ್ದರಿಂದ ಆಟವನ್ನು ರೆಫರಿ ನಿಲ್ಲಿಸಿದ್ದಾರೆ.
ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ ತಂಡದ ಸಿಬ್ಬಂದಿ ಸ್ಟ್ಯಾಂಡ್ ತಲುಪಿದ ನಂತರ, ಆ ವ್ಯಕ್ತಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಭಿಮಾನಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
‘ಬಚ್ ಪನ್ ಕಾ ಪ್ಯಾರ್’ ಹಾಡಿದ ರಾನು ಮೊಂಡಲ್..! ಹಾಡು ಮೆಚ್ಚಿಕೊಂಡ ನೆಟ್ಟಿಗರು
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು, ವ್ಯಕ್ತಿಯನ್ನು ರಕ್ಷಿಸಿದ ನಂತರ ವೈದ್ಯರು ಮತ್ತು ದಾದಿಯರಿಗೆ, ಅಭಿಮಾನಿಗಳು ಹರ್ಷೋದ್ಗಾರ ಮತ್ತು ಚಪ್ಪಾಳೆ ತಟ್ಟುವುದನ್ನು ತೋರಿಸುತ್ತದೆ.
https://www.youtube.com/watch?v=lJ_1eycR4ek&t=65s