ಭಾರತದ ಕೆಲವು ಭಾಗಗಳಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಏನು ಮಾಡಬಹುದು ಎಂಬುದರ ಕುರಿತಾದ ಮುಖ್ಯ ಮಾಹಿತಿ ಇಲ್ಲಿದೆ.
ಒಂದು ತಿಂಗಳಿನಿಂದ ಉತ್ತರ ಪ್ರದೇಶದ ಫಿರೋಜಾಬಾದ್ ಮತ್ತು ಮಥುರಾದಲ್ಲಿ ನಿಗೂಢ ವೈರಲ್ ಜ್ವರದಿಂದ ಮಕ್ಕಳ ಸಾವುಗಳು ಸಂಭವಿಸುತ್ತಿವೆ. ಉತ್ತರ ಪ್ರದೇಶದಿಂದ ವರದಿಯಾಗುತ್ತಿರುವ ಜ್ವರ ಪ್ರಕರಣಗಳಲ್ಲಿ ಒಂದು ತಿಂಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಯುಪಿಯ ಇತರ ಜಿಲ್ಲೆಗಳಾದ ಕಾನ್ಪುರ್, ಪ್ರಯಾಗ್ ರಾಜ್ ಮತ್ತು ಗಾಜಿಯಾಬಾದ್ ಜ್ವರ ಪ್ರಕರಣಗಳು ವರದಿಯಾಗುತ್ತಿವೆ.
ಹಾಗಾದರೆ, ವೈರಲ್ ಜ್ವರ ಯುಪಿಗೆ ಸೀಮಿತವಾಗಿದೆಯೇ?
ಇಲ್ಲ
ದೆಹಲಿ, ಬಿಹಾರ, ಹರಿಯಾಣ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮಕ್ಕಳಲ್ಲಿ ಜ್ವರ ಏಕಾಏಕಿ ಕಾಣಿಸಿಕೊಂಡಿದೆ. ಆದರೆ ಈ ರಾಜ್ಯಗಳಲ್ಲಿ ಸಾವು ಸಂಭವಿಸಿಲ್ಲ.
ಈಗ ಯಾಕೆ?
ಸಾಮಾನ್ಯವಾಗಿ, ಒಂದು ವರ್ಷದಲ್ಲಿ ಮಕ್ಕಳಿಗೆ 6-8 ಉಸಿರಾಟದ ಸೋಂಕುಗಳು ಬರುತ್ತವೆ ಎಂದು ಗಮನಿಸಲಾಗಿದೆ. ಕೋವಿಡ್ -19 ಲಾಕ್‌ಡೌನ್ ತೆರವು ಮಾಡಿದ ನಂತರ ಮಕ್ಕಳು ಹೊರಗಿನ ಪ್ರಪಂಚಕ್ಕೆ ಒಡ್ಡಿಕೊಳ್ಳುವುದು ಯಾವುದೇ ಸೋಂಕು ಹರಡಲು ಕಾರಣವಾಗಿದೆ. ಎರಡನೇ ಕಾರಣವೆಂದರೆ ಹಿಂದಿನ ದಿನದ ಆಹಾರ ಮತ್ತು ಅಶುದ್ಧ ನೀರು ಮೊದಲಾದವು ಸೋಂಕು ಹರಡುವಿಕೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆಗಸ್ಟ್ ನಿಂದ ಇನ್ಫ್ಲುಯೆನ್ಸ್, ಡೆಂಗ್ಯೂ, ಚಿಕೂನ್ ಗುನ್ಯಾದಿಂದ ಹಿಡಿದು ಸ್ಕ್ರಬ್ ಟೈಫಸ್ ವರೆಗಿನ ವೈವಿಧ್ಯಮಯ ವೈರಲ್ ಸೋಂಕುಗಳು ಮಕ್ಕಳಿಗೆ ತಗುಲುತ್ತಿವೆ. ಡೆಂಗ್ಯೂ, ಚಿನ್ಕುನ್ ಗುನ್ಯಾ ಮತ್ತು ಮಲೇರಿಯಾದಂತಹ ವೆಕ್ಟರ್ ಹರಡುವ ರೋಗಗಳು ಮಾನ್ಸೂನ್ ನಂತರದ ಋತುವಿನಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
ಡೆಂಘೀ ಮತ್ತು ಚಿಕೂನ್ ಗುನ್ಯಾ ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚುವುದರಿಂದ ಉಂಟಾಗುತ್ತದೆ, ಇದು ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮಲೇರಿಯಾಕ್ಕೆ ಕಾರಣವಾಗುವ ಅನಾಫಿಲಿಸ್ ಸೊಳ್ಳೆಯು ಕೆಸರು ನೀರಿನಲ್ಲಿ ಸಂತಾನೋತ್ಪತ್ತಿ ಮಾಡಬಹುದು.
ಇಂದು ಹೆಚ್ಚಿನ ಜ್ವರಗಳು ಇನ್ಫ್ಲುಯೆನ್ಸ್ ಅಥವಾ ಡೆಂಗ್ಯೂ ಆಗಿ ವೈರಲ್ ಆಗಿದೆ. ಈ ಜ್ವರಗಳು ದುರ್ಬಲ, ಆಲಸ್ಯದ ಭಾವನೆ ಮೂಡಿಸುತ್ತದೆ. ರೋಗಿಗಳು ದೇಹದ ನೋವಿನಿಂದ ಬಳಲುತ್ತಾರೆ. ಈ ಜ್ವರಗಳಿಗೆ ಕೇವಲ ರೋಗಲಕ್ಷಣದ ಚಿಕಿತ್ಸೆ ಅಗತ್ಯವಿದೆ ಎಂದು ದೆಹಲಿಯ ಮಧುಕರ್ ರೇನ್‌ಬೋ ಮಕ್ಕಳ ಆಸ್ಪತ್ರೆಯ ಹಿರಿಯ ಮಕ್ಕಳ ಸಮಾಲೋಚಕಿ ಡಾ. ಅನಾಮಿಕಾ ದುಬೆ ಹೇಳಿದರು.
ವೈರಲ್ ಫ್ಲೂ ಹೊರತಾಗಿ ಈ ಬಾರಿ ಡೆಂಗ್ಯೂ ಏಕಾಏಕಿ ಕಾಣಿಸಿಕೊಂಡಿದೆ ಎಂದು ದ್ವಾರಕಾ ಆಕಾಶ್ ಹೆಲ್ತ್ ಕೇರ್ ಪೀಡಿಯಾಟ್ರಿಕ್ಸ್ ವಿಭಾಗದ ಕನ್ಸಲ್ಟೆಂಟ್ ಡಾ. ಮೀನಾ ಜೆ. ಅವರು ವಿವರಿಸಿದರು, ನಾವು ಪ್ರತಿದಿನ ಮಕ್ಕಳಲ್ಲಿ 3-5 ಡೆಂಗ್ಯೂ ಪ್ರಕರಣಗಳನ್ನು ನೋಡುತ್ತಿದ್ದೇವೆ. ಮಕ್ಕಳು ಜ್ವರ, ಮೈಕೈ ನೋವು, ಕಿಬ್ಬೊಟ್ಟೆಯ ರೋಗಲಕ್ಷಣ ಹೊಂದಿರುತ್ತಾರೆ. ರಕ್ತ ಪರೀಕ್ಷೆಗಳಿಂದ ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.
ಕೆಲವು ರೋಗಿಗಳು ಕಡಿಮೆ ರಕ್ತದ ಪ್ಲೇಟ್ ಲೆಟ್ ಗಳೊಂದಿಗೆ ಬರುತ್ತಿರುವುದರಿಂದ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಹೆಚ್ಚುತ್ತಿದೆ. ಡೆಂಗ್ಯೂಗೆ ಚಿಕಿತ್ಸೆ ಇಂಟ್ರಾವೆನಸ್(IV) ದ್ರವಗಳು ಅಥವಾ ಔಷಧಿಗಳನ್ನು ಒಳಗೊಂಡಂತೆ ರಕ್ತದೊತ್ತಡವನ್ನು ಸಾಮಾನ್ಯಗೊಳಿಸಬಹುದಾಗಿದೆ. ರಕ್ತಸ್ರಾವವಾಗಿದ್ದರೆ ಮತ್ತು ಪ್ಲೇಟ್‌ಲೆಟ್‌ಗಳು ತುಂಬಾ ಕಡಿಮೆಯಾಗಿದ್ದರೆ, ಪ್ಲೇಟ್ಲೆಟ್ ವರ್ಗಾವಣೆ ಅಗತ್ಯವಿದೆ ಅವರು ಹೇಳಿದರು.
ಕಳೆದ ವರ್ಷ ಏಕಾಏಕಿ ಏಕೆ ಕಾಣಿಸಲಿಲ್ಲ?
ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್ ಡೌನ್ ನಿಂದಾಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ವೆಕ್ಟರ್ ಹರಡುವ ರೋಗಗಳ ಪ್ರಕರಣಗಳು ಸಾಮಾನ್ಯವಾಗಿ ಜುಲೈ ಮತ್ತು ನವೆಂಬರ್ ನಡುವೆ ವರದಿಯಾಗುತ್ತವೆ. ಆದರೆ, ಈ ಅವಧಿಯು ಈ ವರ್ಷದ ಡಿಸೆಂಬರ್ ಮಧ್ಯದವರೆಗೆ ವಿಸ್ತರಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಸ್ಕ್ರಬ್ ಟೈಫಸ್ ಹೆಚ್ಚು ಮಾರಕ: ತಜ್ಞರು
ಸ್ಕ್ರಬ್ ಟೈಫಸ್ ಪ್ರಕರಣಗಳು ಹೆಚ್ಚು ಮಾರಕವಾಗಬಹುದು ಎಂದು ತಜ್ಞರು ನಂಬಿದ್ದಾರೆ. ನಮ್ಮಲ್ಲಿ 6-7 ವರ್ಷ ವಯಸ್ಸಿನ ರೋಗಿ ಸುಮಾರು ಎರಡು ವಾರಗಳವರೆಗೆ ಜ್ವರ ಹೊಂದಿದ್ದ. ರಕ್ತ ಪರೀಕ್ಷೆಯ ಮೂಲಕ ಆತನಿಗೆ ಸ್ಕ್ರಬ್ ಟೈಫಸ್ ಇರುವುದು ಪತ್ತೆಯಾಗಿದ್ದು, ನಂತರ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಕೆಲವೊಮ್ಮೆ ರೋಗವು ಮಾರಕವಾಗಬಹುದು. ಆತನಿಗೆ ತೀವ್ರ ರೋಗ ಇರಲಿಲ್ಲ. ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಎಲ್ಲಾ ಜ್ವರ ಪ್ರಕರಣಗಳನ್ನು ಅನುಮಾನದಿಂದ ನೋಡಬೇಕು. ಸಂಪ್ರದಾಯವಾದಿ ಚುಚ್ಚುಮದ್ದಿನ ನಂತರ ಮಗು ಅದೃಷ್ಟವಶಾತ್ ಚೇತರಿಸಿಕೊಂಡಿದೆ. ಆದರೆ ಕೆಲವೊಮ್ಮೆ ರೋಗವು ಮಾರಕವಾಗಬಹುದು ಎಂದು ಡಾ. ಮೀನಾ ಹೇಳಿದ್ದಾರೆ.
ಸ್ಕ್ರಬ್ ಟೈಫಸ್ ದೀರ್ಘಕಾಲದವರೆಗೆ ಇದ್ದರೆ ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಹಾನಿಗೆ ಕಾರಣವಾಗಬಹುದು, ಜೊತೆಗೆ ಪ್ರಸರಣಗೊಂಡ ಇಂಟ್ರಾವಾಸ್ಕುಲರ್ ಕೋಗ್ಯುಲೇಷನ್(ಡಿಐಸಿ) ರಕ್ತಸ್ರಾವದ ಪ್ರವೃತ್ತಿಯು ರಕ್ತ ಹೆಪ್ಪುಗಟ್ಟುವ ಮತ್ತು ರಕ್ತಸ್ರಾವ ನಿಲ್ಲಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವು ಮಕ್ಕಳಲ್ಲಿ ಚರ್ಮದ ದದ್ದುಗಳನ್ನು ಉಂಟುಮಾಡುತ್ತದೆ, ಅವರು ಆಘಾತಕ್ಕೆ ಒಳಗಾಗಬಹುದು, ಆದ್ದರಿಂದ ಇದರೊಂದಿಗೆ ಸಾವಿನ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ವೈದ್ಯರು ಹೇಳಿದರು.
ಹಿಂದಿನ ವರ್ಷಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿ
ಹಿಂದಿನ ವರ್ಷಗಳಲ್ಲಿ, ಜನವರಿ 1 ಮತ್ತು ಸೆಪ್ಟೆಂಬರ್ 4 ರ ನಡುವೆ, ದೆಹಲಿಯಲ್ಲಿ ಒಟ್ಟು 124 ಪ್ರಕರಣಗಳು ವರದಿಯಾಗಿವೆ. 2016, 2017, 2018, 2019 ಮತ್ತು 2020 ರಲ್ಲಿ ಇದೇ ಅವಧಿಯಲ್ಲಿ ನಗರವು 771, 829, 137, 122 ಮತ್ತು 96 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಶೂನ್ಯ ಸಾವುಗಳು ವರದಿಯಾಗಿದ್ದರೆ, ಈ ರೋಗವು 2016 ಮತ್ತು 2017 ರಲ್ಲಿ ತಲಾ 10 ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಆರೋಗ್ಯ ತಜ್ಞರು ಕೋವಿಡ್ -19 ಗೆ ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ವೈರಲ್ ಜ್ವರ ಪ್ರಕರಣಗಳ ಏರಿಕೆಯ ನಡುವೆಯೂ ತೆಗೆದುಕೊಳ್ಳಬೇಕು. ಜ್ವರದ ಕಾರಣ, ಲಕ್ಷಣ, ತೀವ್ರತೆ ತಿಳಿಯದೇ ಗಾಬರಿಯಾಗಬೇಡಿ ಎಂದು ಸಲಹೆ ನೀಡಿದ್ದಾರೆ.
ಮಕ್ಕಳ ರಕ್ಷಿಸಲು ನೀವು ಏನು ಮಾಡಬಹುದು?
ಮುನ್ನೆಚ್ಚರಿಕೆಗಳಿಗಾಗಿ, ಸೊಳ್ಳೆ ಉತ್ಪತ್ತಿಯ ಸ್ಥಳಗಳನ್ನು ಚೆನ್ನಾಗಿ ನಿರ್ವಹಿಸಬೇಕು. ಮನೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ನೀರು ನಿಲ್ಲಬಾರದು. ಮಕ್ಕಳು ಹೊರಗೆ ಹೋಗುವಾಗಲೆಲ್ಲಾ ಸೊಳ್ಳೆ ನಿವಾರಕಗಳನ್ನು ಬಳಸಬೇಕು ಎಂದು ಡಾ. ಮೀನಾ ಜೆ. ಹೇಳುತ್ತಾರೆ.
ಹಾಗೆಯೇ, ಮಕ್ಕಳಿಗೆ ಹಳೆಯ ಆಹಾರವನ್ನು ನೀಡುವುದನ್ನು ತಪ್ಪಿಸಿ.
ನಿಮ್ಮ ಮಗುವನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು?
ಯಾವುದೇ ನಿಗೂಢ ರೋಗಗಳು ಅಥವಾ ಜ್ವರ 3-4 ದಿನಗಳ ನಂತರವೂ ಇದ್ದರೆ, ಮಗು 103-104 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಜ್ವರದಿಂದ ಬಳಲುತ್ತಿದ್ದರೆ, ಜ್ವರ ಇಲ್ಲದಿದ್ದರೂ ಮಗು ಆಹಾರ ಅಥವಾ ದ್ರವಗಳನ್ನು ಸೇವಿಸದಿದ್ದರೆ, ಕೈಕಾಲುಗಳಲ್ಲಿ ತೀವ್ರವಾದ ನೋವು ಅಥವಾ ದೇಹದ ಮೇಲೆ ದದ್ದುಗಳು ಅಥವಾ ಮಗುವಿನ ಮೂತ್ರದ ಪ್ರಮಾಣ ಕಡಿಮೆಯಾಗಿದ್ದರೆ, ಆಸ್ಪತ್ರೆಗೆ ಕರೆತರಬೇಕಿದೆ ಎಂದು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಶಿಶುವೈದ್ಯ ಡಾ ಧೀರನ್ ಗುಪ್ತಾ ಹೇಳಿದ್ದು ಅಂತಹ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಎಂದು ವೈದ್ಯರು ನಿರ್ಧರಿಸುತ್ತಾರೆ. ಇಲ್ಲದಿದ್ದರೆ, ಮಗುವಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದ್ದಾರೆ.